ಬೆಂಗಳೂರು: ಸಾಹಸಮಯ ಹಾಗೂ ರೋಮಾಂಚನಕಾರಿ ಕ್ರೀಡೆ ಎನಿಸಿಕೊಂಡಿರುವ ಸ್ಕೈ ಡೈವಿಂಗ್ ಮಾಡಲು ಗಟ್ಟಿ ಗುಂಡಿಗೆ ಬೇಕು. ಆಕಾಶದಲ್ಲಿ ಸಾವಿರಾರು ಅಡಿ ಎತ್ತರದಿಂದ ವಿಮಾನದಿಂದ ಹೊರಗೆ ಬಂದು ಗಾಳಿಯ ಭಾರಿ ವೇಗ ಹಾಗೂ ಒತ್ತಡದ ಜೊತೆ ಭೂಮಿಗೆ ಡೈವಿಂಗ್ ಹೊಡೆದು ಸುರಕ್ಷಿತವಾಗಿ ಬರುವುದು ಸಣ್ಣ ಮಾತಲ್ಲ.

ಇತ್ತೀಚೆಗೆ ಸ್ಕೈ ಡೈವಿಂಗ್ ಕ್ರೀಡೆಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅನೇಕರು ಸಾಹಸ ಪ್ರದರ್ಶನ ಮಾಡುತ್ತಾರೆ. ಅದಾಗ್ಯೂ ಒಂದೊಂದು ಎಡವಟ್ಟುಗಳು ನಡೆದೇ ಹೋಗಿರುತ್ತವೆ.

ಇದೀಗ ಸ್ಕೈ ಡೈವಿಂಗ್ಗೆ ಸಂಬಂಧಿಸಿದಂತೆ ಆಸ್ಟೇಲಿಯಾದಲ್ಲಿ ನೋಡುಗರ ಎದೆ ಝಲ್ಲೆನಿಸುವಂತಹ ಘಟನೆಯೊಂದು ನಡೆದು ಹೋಗಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಗಿದ್ದೇನು?

ಕಳೆದ ಸೆಪ್ಟೆಂಬರ್ 5 ರಂದು ಆಸ್ಟ್ರೇಲಿಯಾದ ಉತ್ತರ ಭಾಗವಾದ ಕ್ವೀನ್ಸ್ಲ್ಯಾಂಡ್ನ ಟುಳ್ಳಿ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆ ಆಯೋಜಿಸುವ ಸ್ಕೈ ಡೈವಿಂಗ್ನಲ್ಲಿ ಹಲವರು ಭಾಗವಹಿಸಿದ್ದರು.

ವಿಮಾನ 15 ಸಾವಿರ ಅಡಿ ಮೇಲೆ ಹೋದಾಗ ಸ್ಕೈ ಡೈವಿಂಗ್ ತಂಡದವರು ಡೈವಿಂಗ್ ಮಾಡಲು ಸಿದ್ದರಾಗಿದ್ದರು. ಆಗ ಒಬ್ಬ ಡೈವರ್, ಡೈವ್ ಹೊಡೆಯುವ ವೇಳೆ ಗಾಳಿಯ ರಭಸಕ್ಕೆ ನಿಯಂತ್ರಣ ತಪ್ಪಿ ಹಾರಿಹೋಗುತ್ತಾರೆ. ತಕ್ಷಣವೇ ಆ ಡೈವರ್ ಪ್ಯಾರಾಚೂಟ್ ಸಮೇತ ವಿಮಾನದ ರೆಕ್ಕೆಗೆ ಕೆಲ ಹೊತ್ತು ಸಿಲುಕಿಕೊಳ್ಳುತ್ತಾರೆ. ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದ್ದು ನೋಡುಗರ ಎದೆ ಝಲ್ಲೆನಿಸುತ್ತದೆ. ಅದೃಷ್ಟವಶಾತ್ ಮುಖ್ಯ ಪ್ಯಾರಾಚೂಟ್ನ ತುರ್ತು ಬಟನ್ ಸರಿಯಾಗಿ ಕೆಲಸ ಮಾಡಿದ್ದರಿಂದ ಆ ಡೈವರ್ ಸಣ್ಣ ಪುಟ್ಟ ಗಾಯಗಳಿಂದ ಬದುಕುಳಿದಿದ್ದಾರೆ.

ಇನ್ನೊಂದು ವಿಶೇಷ ಎಂದರೆ ಆ ಘಟನೆ ನಡೆದ ಸಮಯದಲ್ಲಿ ಉಳಿದ ಡೈವರ್ಗಳು ಸುರಕ್ಷಿತವಾಗಿ ಡೈವ್ ಹೊಡೆಯುತ್ತಾರೆ.

ಈ ದುರಂತ ಅಷ್ಟಕ್ಕೆ ಮುಗಿದರಲಿಲ್ಲ. ಸ್ಕೈ ಡೈವರ್ ನಿಯಂತ್ರಣ ತಪ್ಪಿ ಹೋಗಿ ವಿಮಾನದ ಒಂದು ರೆಕ್ಕೆಗೆ ಅಪ್ಪಳಿಸಿದ್ದರಿಂದ ರೆಕ್ಕೆಗೆ ಹಾನಿಯಾಗಿತ್ತು. ಪೈಲಟ್ ‘ಮೇ ಡೇ’ ಘೋಷಣೆ ಮಾಡಿದ್ದ. ಅದಾಗ್ಯೂ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.

ಸೆಪ್ಟೆಂಬರ್ನಲ್ಲಿ ನಡೆದ ಈ ಘಟನೆ ಬಗ್ಗೆ ತನಿಖೆ ನಡೆಸಿ ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಘಟಕ (ATSB) ಯೂಟ್ಯೂಬ್ನಲ್ಲಿ ವಿಡಿಯೊ ಹಂಚಿಕೊಂಡು ಸರಕ್ಷತಾ ಮಾನದಂಡಗಳ ಬಗ್ಗೆ ಎಚ್ಚರದಿಂದಿರುವಂತೆ ಸಾರ್ವಜನಿಕರಿಗೆ ತಿಳಿಸಿದೆ.

ವಿಡಿಯೊ ಸದ್ಯ ಆನ್ಲೈನ್ಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸ್ಕೈ ಡೈವಿಂಗ್ ಪ್ರೇಮಿಗಳಿಗೆ ಇದೊಂದು ದೊಡ್ಡ ಎಚ್ಚರಿಕೆಯ ಪಾಠ ಎಂದು ಚರ್ಚಿಸಲಾಗುತ್ತಿದೆ.

ಸ್ಕೈ ಡೈವರ್ ಹಾಗೂ ಪೈಲಟ್ ತೋರಿದ ಜಾಣತನದಿಂದ ಅಂದು ದೊಡ್ಡ ದುರಂತ ತಪ್ಪಿದೆ. ತನಿಖೆ ನಡೆಸಿ ಸ್ಕೈ ಡೈವಿಂಗ್ ಸಂಸ್ಥೆಗೆ ಎಚ್ಚರಿಕೆ ನೀಡಲಾಗಿದೆ ಎಂದು ಎಟಿಎಸ್ಬಿಯ ಆಯುಕ್ತೆ ಆಂಗುಸ್ ಮಿಚೆಲ್ ತಿಳಿಸಿದ್ದಾರೆ.

ಅಮೆರಿಕ, ದುಬೈ ಹಾಗೂ ಆಸ್ಟ್ರೇಲಿಯಾದಲ್ಲಿ ಸ್ಕೈ ಡೈವಿಂಗ್ ಕ್ರೀಡೆ ಜನಪ್ರಿಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.