ಮಂಗಳವಾರ, ನವೆಂಬರ್ 29, 2022
29 °C
ಫ್ಲಿಪ್‌ಕಾರ್ಟ್‌ನಲ್ಲಿ ಹಬ್ಬದ ಕೊಡುಗೆ ಸೇಲ್‌ನಲ್ಲಿ ಐಫೋನ್ ಬುಕ್ ಮಾಡಿದ್ದ ಗ್ರಾಹಕರು

Apple | ಬುಕ್ ಮಾಡಿದ್ದು ಐಫೋನ್ 13, ಫ್ಲಿಪ್‌ಕಾರ್ಟ್‌ನಲ್ಲಿ ಬಂದಿದ್ದು ಐಫೋನ್ 14!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಬ್ಬದ ವಿಶೇಷ ಮಾರಾಟದ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 ಬುಕ್ ಮಾಡಿದ್ದ ಗ್ರಾಹಕರೊಬ್ಬರಿಗೆ ಐಫೋನ್ 14 ಬಂದು ತಲುಪಿದೆ.

ಈ ಕುರಿತು ಟ್ವಿಟರ್ ಬಳಕೆದಾರ ಅಶ್ವಿನ್ ಹೆಗ್ಡೆ ಟ್ವೀಟ್ ಮಾಡಿದ್ದಾರೆ. ಅವರ ಫಾಲೋವರ್ಸ್ ಒಬ್ಬರು ಫ್ಲಿಪ್‌ಕಾರ್ಟ್ ಮೂಲಕ ಐಫೋನ್ 13 ಬುಕ್ ಮಾಡಿದ್ದರು. ಆದರೆ ಅವರಿಗೆ ಐಫೋನ್ 14  ಅನ್ನು ಫ್ಲಿಪ್‌ಕಾರ್ಟ್ ಡೆಲಿವರಿ ಮಾಡಿದೆ.

ದೇಶದಲ್ಲಿ ಆ್ಯಪಲ್ ಐಫೋನ್ 14 ಆರಂಭಿಕ ದರ ಸ್ಟೋರ್‌ಗಳಲ್ಲಿ ₹79,900 ಇದ್ದರೆ, ಐಫೋನ್ 13, 128ಜಿಬಿ ಮಾದರಿಗೆ ₹69,900 ದರವಿದೆ. ಹಬ್ಬದ ವಿಶೇಷ ಮಾರಾಟದ ಸಂದರ್ಭದಲ್ಲಿ ಐಫೋನ್ 13, ₹50 ಸಾವಿರಕ್ಕಿಂತ ಕಡಿಮೆಗೆ ಲಭ್ಯವಾಗುತ್ತಿತ್ತು. ಹೀಗಾಗಿ ಗ್ರಾಹಕರು ಐಫೋನ್ 13 ಬುಕ್ ಮಾಡಿದ್ದರು.

ಆದರೆ ಅವರಿಗೆ ಐಫೋನ್ 13 ಬದಲಿಗೆ, ಇತ್ತೀಚೆಗೆ ಬಿಡುಗಡೆಯಾದ ಐಫೋನ್ 14 ದೊರೆತಿದೆ.

ಐಫೋನ್ ಅದಲು ಬದಲಾದ ಬಗ್ಗೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು, ಅದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿ, ನೀವು ಬುಕ್ ಮಾಡಿರುವುದನ್ನೇ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು