ಗುರುವಾರ , ಜೂಲೈ 2, 2020
28 °C

ದಾಂಡೇಲಿ: ಆಸ್ಪತ್ರೆಗೆ ಬಂದು ಗಾಯಕ್ಕೆ ಮುಲಾಮು ಹಚ್ಚಿಸಿಕೊಂಡ ಕೋತಿ, ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Monkey Asks Treatment For Wound in Dandeli

ಕಾರವಾರ: ಬೆನ್ನಿನ ಭಾಗಕ್ಕೆ ಗಾಯವಾಗಿದ್ದ ಕೋತಿಯೊಂದು ದಾಂಡೇಲಿಯ ನರ್ಸಿಂಗ್ ಹೋಂಗೆ ಬಂದು ಮುಲಾಮು ಹಚ್ಚಿಸಿಕೊಂಡ ವಿಡಿಯೊ ವೈರಲ್ ಆಗಿದೆ. 

ಜನರ ಮಧ್ಯೆಯೇ ನಡೆದುಕೊಂಡು ಬಂದ ಕೋತಿಯು, ನರ್ಸಿಂಗ್ ಹೋಂನ ಬಾಗಿಲಿನ ಬಳಿ ಕುಳಿತಿತ್ತು. ಅದನ್ನು ಆಸ್ಪತ್ರೆಯ ಸಿಬ್ಬಂದಿ ಹಾಗೂ ಅಲ್ಲಿದ್ದ ಸಾರ್ವಜನಿಕರು ಓಡಿಸಲು ಪ್ರಯತ್ನಿಸಿದರೂ ಅದು ಹೋಗಲಿಲ್ಲ. ಬದಲಾಗಿ, ಬೆನ್ನಿಗಾದ ಗಾಯವನ್ನು ತನ್ನ ಕೈಯಿಂದ ತೋರಿಸಲು ಯತ್ನಿಸಿತು.

ಕೋತಿಯ ವೇದನೆಗೆ ಮಿಡಿದ ಕೆಲವರು, ಅದನ್ನು ಎತ್ತಿಕೊಂಡು ಕಟ್ಟೆಯ ಮೇಲೆ ಕೂರಿಸಿದರು. ಆಸ್ಪತ್ರೆಯ ಸಿಬ್ಬಂದಿಯಿಂದ ಮುಲಾಮು ಪಡೆದು ಗಾಯಕ್ಕೆ ಹಚ್ಚಿದರು. ಈ ವೇಳೆಯಲ್ಲಿ ಕೋತಿಯು ಯಾರನ್ನೂ ಬೆದರಿಸದೇ ಸುಮ್ಮನೆ ಕುಳಿತಿದ್ದು ನೋಡಿ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದರು. ಮುಲಾಮು ಹಚ್ಚಿಸಿಕೊಂಡ ಬಳಿಕವೇ ಅದು ಅಲ್ಲಿಂದ ಹೋಯಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು