ಮಂಗಳವಾರ, ಜೂನ್ 28, 2022
25 °C

ಟಿವಿ ಲೈವ್ ಕಾರ್ಯಕ್ರಮದಲ್ಲೇ ಸಂಸದನ ಕೆನ್ನೆಗೆ ಹೊಡೆದ ಮಹಿಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

Tarek Fatah @TarekFatah Twitter screenshot

ಬೆಂಗಳೂರು: ಟಿವಿ ವಾಹಿನಿಗಳಲ್ಲಿ ನಡೆಯುವ ಚರ್ಚೆ ಕಾರ್ಯಕ್ರಮಗಳಲ್ಲಿ ಲೈವ್‌ನಲ್ಲಿಯೇ ಕೆಲವೊಮ್ಮೆ ಸ್ವಾರಸ್ಯಕರ ಸಂಗತಿಗಳು ನಡೆಯುತ್ತವೆ.

ಟಿವಿ ಸ್ಟುಡಿಯೋಗಳಲ್ಲಿ ಕೂಡ ನಡೆಯುವ ಲೈವ್ ಕಾರ್ಯಕ್ರಮದಲ್ಲಿ ಗಂಡ-ಹೆಂಡತಿ ಜಗಳದಂತಹ ವಿಚಾರ ಕೂಡ ನಡೆಯುತ್ತದೆ.

ಪಾಕಿಸ್ತಾನದ ಎಕ್ಸ್‌ಪ್ರೆಸ್ ಟಿವಿ ವಾಹಿನಿಯ ಚರ್ಚೆ ಕಾರ್ಯಕ್ರಮದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ನಾಯಕಿ ಡಾ. ಫಿರ್ದೋಸ್ ಆಶಿಕ್ ಭಾಗವಹಿಸಿದ್ದರು. ಅದೇ ಸಂವಾದದಲ್ಲಿ ಮತ್ತೊಂದು ಕಡೆ ಪ್ರತಿಪಕ್ಷದ ಸಂಸದ ಖಾದಿರ್ ಖಾನ್ ಕೂಡ ಇದ್ದರು.

ಚರ್ಚೆ ನಡೆಯುವ ವೇಳೆ ಫಿರ್ದೋಸ್ ತಾಳ್ಮೆ ಕಳೆದುಕೊಂಡು, ಸಂಸದ ಖಾದಿರ್ ಕೆನ್ನೆಗೆ ಬಾರಿಸಿದ್ದಾರೆ. ಟಿವಿ ಲೈವ್ ನಡೆಯುವ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ.

ತಾರೆಕ್ ಫತಾಹ್ ಈ ವಿಡಿಯೊ ಕ್ಲಿಪ್ ಅನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪಾಕಿಸ್ತಾನ ಸಂಸತ್ ನಾಯಕರ ನಡುವಿನ ಜಗಳ ಮತ್ತು ಸಂಸದೆ, ಪಾಕ್ ನಾಯಕನ ಕೆನ್ನೆಗೆ ಹೊಡೆಯುವ ದೃಶ್ಯಗಳು ವೈರಲ್ ಆಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು