ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜವಾನ್ ಚಿತ್ರದ Beqarar ಹಾಡಿಗೆ ಶಾರುಕ್ ರೀತಿ ಮೆಟ್ರೊದಲ್ಲಿ ನೃತ್ಯ ಮಾಡಿದ ಯುವತಿ

Published : 27 ಸೆಪ್ಟೆಂಬರ್ 2023, 12:40 IST
Last Updated : 27 ಸೆಪ್ಟೆಂಬರ್ 2023, 12:40 IST
ಫಾಲೋ ಮಾಡಿ
Comments

ನವದೆಹಲಿ: ಬಾಲಿವುಡ್‌ ನಟ ಶಾರುಕ್‌ ಖಾನ್‌ ನಟನೆಯ ಜವಾನ್‌ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಸಿನಿ ಪ್ರಿಯರ ಮನ ಗೆದ್ದಿದೆ. ಚಿತ್ರದ ಪೋಸ್ಟರ್‌ನಲ್ಲಿ ಅರ್ಧ ಮುಖಕ್ಕೆ ಬ್ಯಾಂಡೇಜ್‌ ಸುತ್ತಿಕೊಂಡಿದ್ದ ಶಾರುಖ್‌ ಲುಕ್‌ ಗಮನ ಸೆಳೆದಿತ್ತು. ಅದೇ ರೀತಿ ಚಿತ್ರದ ಹಾಡುಗಳೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. 

ಇದೀಗ ಯುವತಿಯೊಬ್ಬಳು ಚಲಿಸುತ್ತಿರುವ ಮೆಟ್ರೊದಲ್ಲಿ ಶಾರುಕ್‌ರಂತೆ ಅರ್ಧ ಮುಖಕ್ಕೆ ಬ್ಯಾಂಡೇಜ್‌ ಸುತ್ತಿಕೊಂಡು, ಶಾರುಕ್ ಧರಿಸಿದ ಬಟ್ಟೆಯನ್ನೇ ಹೋಲುವ ಡ್ರೆಸ್‌ ಧರಿಸಿ Beqarar Karke Hume Yun Na Jaiye ಹಾಡಿಗೆ ಡ್ಯಾನ್ಸ್‌ ಮಾಡಿದ್ದಾಳೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಸಹೇಲಿ ರುದ್ರಾ ಎನ್ನುವ ಹೆಸರಿನ ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು  ವಿಡಿಯೊ ಹಂಚಿಕೊಂಡು ‘ಲೇಡಿ ಜವಾನ್‌’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. 

ವಿಡಿಯೊವನ್ನು ಹಂಚಿಕೊಂಡಾಗಿನಿಂದ ಈವರೆಗೆ 9 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದ್ದು, 4 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. ಜೊತೆಗೆ ಜವಾನ್‌ ಚಿತ್ರದ ದೃಶ್ಯವನ್ನು ಮರುಸೃಷ್ಟಿ ಮಾಡಿದ ಯುವತಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಸಾವಿರ ಕೋಟಿ ಗಳಿಕೆ ಕಂಡ ಜವಾನ್ ಚಿತ್ರ! ಬಾಲಿವುಡ್‌ನಲ್ಲಿ ಹೊಸ ಭರವಸೆ

ಸೆಪ್ಟೆಂಬರ್ 7ರಂದು ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಂಡಿತ್ತು, ಸೆ.25ರಂದು ಸಾವಿರ ಕೋಟಿ ಗಳಿಸಿದ ಹಿಂದಿ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಜವಾನ್ ಚಿತ್ರದ ವಿಶ್ವದಾದ್ಯಂತ ಮೊದಲ ದಿನದ ಅತ್ಯಧಿಕ ಗಳಿಕೆ ಕಂಡಿತ್ತು. ಗಳಿಕೆ ದೃಷ್ಟಿಯಿಂದ ಇತ್ತೀಚೆಗೆ ಬಾಲಿವುಡ್ ಚಿತ್ರಗಳು ಮಕಾಡೆ ಮಲಗುತ್ತಿರುವಾಗ ಜವಾನ್ ಚಿತ್ರ ಬಾಲಿವುಡ್‌ನಲ್ಲಿ ಹೊಸ ಆಶಾವಾದ ಹುಟ್ಟಿಸಿದೆ.

ಜವಾನ್ ಚಿತ್ರದಲ್ಲಿ ವಿಜಯ್ ಸೇತುಪತಿ, ಸಂಜಯ್ ದತ್, ನಯನತಾರಾ, ದೀಪಿಕಾ ಪಡುಕೋಣೆ ವಿಶೇಷ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾಹ್ ಖುರೇಷಿ, ರಿಧಿ ದೊಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಾ ತಾರಾಗಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT