ಬುಧವಾರ, ಅಕ್ಟೋಬರ್ 20, 2021
25 °C

ಬೆಂಗಳೂರು: ಸಾಗರ ಕನ್ಯೆ ಶ್ರೀ ವಾಸವಿಯ ನೋಡ ಬನ್ನಿ...

ಟೈಟಾನಿಕ್ ಹಡಗಿನಲ್ಲಿ ಕೂತು ಸಮುದ್ರದ ಸೊಬಗನ್ನ ನೋಡನೋಡುತ್ತಲೇ ಸಾಗರದ ಗರ್ಭ ಪ್ರವೇಶಿಸಿದ ಅನುಭವ.. ಬಣ್ಣ ಬಣ್ಣದ ಮೀನುಗಳು, ಶಾರ್ಕ್ ಗಳು, ನೀರಿನೊಳಗಿನ ಸಸ್ಯ ಕಾಶಿಯ ಅದ್ಭುತ ವಿಸ್ಮಯಗಳು, ಇದರ ನಡುವೆ ವಾಸವಿ ಮಾತೆಯ ದಿವ್ಯ ದರ್ಶನ ಮಾಡುವ ಸೌಭಾಗ್ಯ.. ಇದ್ಯಾವುದೋ ಬೇರೆ ಊರಲ್ಲ.. ನಮ್ಮ ಹೆಮ್ಮೆಯ ಬೆಂಗಳೂರಿನ ಮಲ್ಲೇಶ್ವರದ ಕನ್ಯಕಾ ಪರಮೇಶ್ವರಿ ದೇವಾಲಯ.