ಮಂಗಳವಾರ, ಜೂನ್ 15, 2021
20 °C

ಗ್ರಾಮಾರೋಗ್ಯ- ದಾವಣಗೆರೆ: ಕೊರೊನಾ ಲೆಕ್ಕಕ್ಕೆ ಸಿಗದೆ ಸತ್ತವರ ನೆರಳು!

ದಾವಣಗೆರೆಯನ್ನು ಮಧ್ಯಕರ್ನಾಟಕ ಎಂದು ಕರೆಯಲಾಗುತ್ತದೆ. ಕೊರೊನಾ ಸೋಂಕಿನಲ್ಲಿಯೂ ಅತಿ ಹೆಚ್ಚು ಅಥವಾ ಅತಿ ಕಡಿಮೆ ಇರುವ ಜಿಲ್ಲೆಯಾಗದೇ ಮಧ್ಯದಲ್ಲಿಯೇ ಇದೆ. ಜಿಲ್ಲೆಯಲ್ಲಿ ಮೊದಲ ಅಲೆಯು ನಗರಗಳಲ್ಲಿ ಹೆಚ್ಚು ಕಾಣಿಸಿಕೊಂಡಿತ್ತು. ಎರಡನೇ ಅಲೆಯು ನಗರಗಳ ಜತೆಗೆ ಹಳ್ಳಿಗಳನ್ನೂ ಬಾಧಿಸುತ್ತಿದೆ. ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಎಂಬ ಪುಟ್ಟ ಗ್ರಾಮವೊಂದರಲ್ಲಿಯೇ 65ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಹೊನ್ನಾಳಿ ತಾಲ್ಲೂಕಿನ ಕೂಲಂಬಿಯಲ್ಲಿ ಅರ್ಧ ಶತಕದ ಗಡಿ ದಾಟಿದೆ. ಶೀತ, ಜ್ವರ, ಕೆಮ್ಮು ಆರಂಭಗೊಂಡಾಗ ಕೊರೊನಾ ಪರೀಕ್ಷೆ ಮಾಡಿಸದೇ ಹತ್ತಿರದ ವೈದ್ಯರಿಂದ ಗುಳಿಗೆ ತಗೊಂಡು ಹೋಗಿರುವುದೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಪ್ರಜಾವಾಣಿ ತಂಡ ಎಲ್ಲ ತಾಲ್ಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದಾಗ ಇಂಥ ಸಮಸ್ಯೆಗಳು ಬೆಳಕಿಗೆ ಬಂದವು. ಅಸರ ವರದಿ ಇಲ್ಲಿದೆ ನೋಡಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp