ಸೋಮವಾರ, ಮಾರ್ಚ್ 1, 2021
28 °C

ರೋಚಕ ವಿಡಿಯೊ: ನುಗು ಡ್ಯಾಮ್‌ನಲ್ಲಿ ಬಲೆಗೆ ಸಿಲುಕಿದ್ದ ಆನೆ ರಕ್ಷಣೆ

ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ನುಗು ಡ್ಯಾಮ್ ನಲ್ಲಿ ಸಿಲುಕಿದ್ದ ಆನೆಯನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ನೀರಿನಲ್ಲಿದ್ದ ಬಲೆಗೆ ಗಂಡಾನೆ ಸಿಲುಕಿಕೊಂಡಿತ್ತು. ಬಲೆ ಮರದ ತುಂಡಿಗೆ ಸಿಲುಕಿಕೊಂಡಿದ್ದರಿಂದ ಆನೆ ನೀರಿನಿಂದ ಹೊರಬರಲಾಗದೇ ಬಳಲುತ್ತಿತ್ತು. ಅರಣ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾಕಾರ್ಯ ಮಾಡಿ ಆನೆಯನ್ನು ರಕ್ಷಣೆ ಮಾಡಿದ್ದಾರೆ.