ಮಂಗಳವಾರ, ಅಕ್ಟೋಬರ್ 19, 2021
24 °C

ಹುಬ್ಬಳ್ಳಿ: ಸಾರಿಗೆ ಪಥದಲ್ಲಿ ನಾರಿ ಹೆಜ್ಜೆ

 

ಮಹಿಳೆ ಮನೆಯಿಂದ ಹೊರಬಂದು ವಿವಿಧ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾಳೆ. ಸಾರಿಗೆ ಸಂಸ್ಥೆ ಕಚೇರಿ ಕೆಲಸಗಳಲ್ಲಿ ಮಹಿಳಾ ಸಿಬ್ಬಂದಿ ನೇಮಕಾತಿ ನಡೆದರೂ ಡ್ರೈವರ್‌, ಕಂಡಕ್ಟರ್‌, ವರ್ಕಶಾಪ್‌ಗಳಲ್ಲಿ ಮಹಿಳೆಯರ ತಲೆ ಕಾಣುತ್ತಿರಲಿಲ್ಲ. 1998ರ ಶುರುವಿನಲ್ಲಿ ನಿರ್ವಾಹಕರಾಗಿ ಕೆಲಸಕ್ಕೆ ಸೇರಿದ ನಮ್ಮ ಲೇಡಿ ಕಂಡಕ್ಟರ್ಸ್‌ ಸಾಕಷ್ಟು ಅಡ್ಡಿ–ಆತಂಕಗಳನ್ನು ಎದುರಿಸಿದ್ದು ಸುಳ್ಳಲ್ಲ.