ಮುಟ್ಟಿನ ಕಪ್‌ಗಳ ಬಳಕೆಗೆ ಹೆಚ್ಚು ಸ್ವಚ್ಛತೆ ಅಗತ್ಯವಾಗಿರುತ್ತದೆ. ಪ್ಯಾಡ್‌ಗಳನ್ನು ಬಳಸಿದಂತೆ ಸುಲಭವಾದ ಬಳಕೆ ಸಾಧ್ಯವಾಗದು. ಅದರಲ್ಲೂ ಮಕ್ಕಳಿಗೆ ಮುಟ್ಟಿನ ಕಪ್ ಬಳಕೆ ತುಸು ಅಪಾಯಕಾರಿ. ಏಕೆಂದರೆ ಕಪ್‌ಗಳನ್ನು ಯೋನಿಯೊಳಗೆ ಅಳವಡಿಸಿಕೊಳ್ಳಬೇಕಾಗಿರುವುದರಿಂದ ಅದರ ಬಗ್ಗೆ ತಿಳಿವಳಿಕೆ ಅಗತ್ಯವಾಗಿರುತ್ತದೆ. ಇಲ್ಲದಿದ್ದರೆ ಸೋಂಕುಗಳ ಅಪಾಯ ಹೆಚ್ಚು. ಕೆಲವು ಅಧ್ಯಯನವೂ ಮಕ್ಕಳಿಗೆ ಮತ್ತು ಮದುವೆಯಾಗದ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್‌ಗಳು ಅಪಾಯಕಾರಿ ಎಂದೇ ಹೇಳುತ್ತವೆ. ಹೀಗಾಗಿ ಪ್ಯಾಡ್‌ಗಳ ಬಳಕೆಯೇ ಸುರಕ್ಷಿತ. ಒಮ್ಮೆ ಮಾತ್ರ ಬಳಸಬಹುದಾಗಿದ್ದರಿಂದ ಸೋಂಕಿನ ಅಪಾಯವೂ ತೀರಾ ಕಡಿಮೆ ಇರುತ್ತದೆ.