ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿ ಹಂಚಿಕೆಗೆ ಪಾವತಿ: ತಿದ್ದುಪಡಿ ಕಾಯ್ದೆಗೆ ಆಸ್ಟ್ರೇಲಿಯಾ ಅಸ್ತು

Last Updated 25 ಫೆಬ್ರುವರಿ 2021, 7:41 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ತಮ್ಮ ಜಾಲತಾಣ ವೇದಿಕೆಗಳಲ್ಲಿ ಸುದ್ದಿಗಳನ್ನು ಹಂಚಿಕೊಳ್ಳುವುದಕ್ಕೆ ಪ್ರತಿಯಾಗಿ ಮಾಧ್ಯಮ ಸಂಸ್ಥೆಗಳಿಗೆ ಗೂಗಲ್‌ ಮತ್ತು ಫೇಸ್‌ಬುಕ್‌ ಶುಲ್ಕ ಪಾವತಿಸುವುದಕ್ಕೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗೆ ಆಸ್ಟ್ರೇಲಿಯಾ ಸಂಸತ್‌ ಗುರುವಾರ ಅನುಮೋದನೆ ನೀಡಿತು.

ಸಚಿವ ಜೋಶ್‌ ಫ್ರೈಡೆನ್‌ಬರ್ಗ್‌ ಹಾಗೂ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ನಡುವೆ ಈ ಸಂಬಂಧ ಒಪ್ಪಂದ ನಡೆದಿತ್ತು. ಅದರ ಆಧಾರದಲ್ಲಿ ‘ನ್ಯೂಸ್ ಮೀಡಿಯಾ ಬಾರ್ಗೇನಿಂಗ್‌ ಕೋಡ್‌’ ಕಾಯ್ದೆಗೆ ತಂದ ತಿದ್ದುಪಡಿಯನ್ನು ಅಂಗೀಕರಿಸಲಾಗಿದೆ.

ಅಲ್ಲದೇ, ಒಪ್ಪಂದದಂತೆ, ಆಸ್ಟ್ರೇಲಿಯಾದಲ್ಲಿನ ತನ್ನ ಬಳಕೆದಾರರು ಸುದ್ದಿಗಳನ್ನು ಹಂಚಿಕೊಳ್ಳಲು, ಓದಲು ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸುವುದಾಗಿ ಫೇಸ್‌ಬುಕ್‌ ಹೇಳಿದೆ.

‘ಆಸ್ಟ್ರೇಲಿಯಾದ ಸುದ್ದಿಸಂಸ್ಥೆಗಳು ಹಾಗೂ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ನಡುವಿನ ಭಿನ್ನಾಭಿಪ್ರಾಯದಿಂದ ಮಾರುಕಟ್ಟೆಯಲ್ಲಿ ಕಂಡುಬಂದಿದ್ದ ಅಸಮತೋಲನ ಈ ತಿದ್ದುಪಡಿಯಿಂದ ನಿವಾರಣೆಯಾಗುವುದು. ಇದೊಂದು ಒಳ್ಳೆಯ ಬೆಳವಣಿಗೆ’ ಎಂದು ಕಾಯ್ದೆಗೆ ತಿದ್ದುಪಡಿಯನ್ನು ಸಿದ್ಧಪಡಿಸಿರುವ, ರಾಡ್‌ ಸಿಮ್ಸ್‌ ಪ್ರತಿಕ್ರಿಯಿಸಿದ್ದಾರೆ. ಅವರು ಕಂಪನಿಗಳ ನಡುವಿನ ಸ್ಪರ್ಧೆಯನ್ನು ನಿಯಂತ್ರಣದ ಉಸ್ತುವಾರಿ.

ನ್ಯೂಸ್‌ ಕಾರ್ಪ್‌, ಸೆವೆನ್‌ ವೆಸ್ಟ್‌ ಮೀಡಿಯಾ ಸೇರಿದಂತೆ ಪ್ರಮುಖ ಸುದ್ದಿಸಂಸ್ಥೆಗಳೊಂದಿಗೆ ಗೂಗಲ್‌ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.

‘ಈ ತಿದ್ದುಪಡಿ ಕಾಯ್ದೆಯಿಂದ ದೊಡ್ಡ ಸಂಸ್ಥೆಗಳಿಗೆ ಮಾತ್ರ ಲಾಭವಾಗುವುದು. ಕಡಿಮೆ ಪ್ರಮಾಣದಲ್ಲಿ ಪ್ರಸಾರ ಹೊಂದಿರುವ ಪತ್ರಿಕಾಸಂಸ್ಥೆಗಳು ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಕಂಟ್ರಿ ಪ್ರೆಸ್‌ ಆಸ್ಟ್ರೇಲಿಯಾ ಕಳವಳ ವ್ಯಕ್ತಪಡಿಸಿದೆ.

ದಿನಪತ್ರಿಕೆ ಪ್ರಕಟಿಸುವ ದೇಶದ 161 ಪ್ರಕಾಶನ ಸಂಸ್ಥೆಗಳನ್ನು ಕಂಟ್ರಿ ಪ್ರೆಸ್‌ ಆಸ್ಟ್ರೇಲಿಯಾದ ಪ್ರತಿನಿಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT