ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತ ಭವನದಲ್ಲಿ ಯುಎಇ, ಬ್ರಹೇನ್‌, ಇಸ್ರೇಲ್‌ ಶಾಂತಿ ಒಪ್ಪಂದ; ಟ್ರಂಪ್‌ ನೇತೃತ್ವ

Last Updated 16 ಸೆಪ್ಟೆಂಬರ್ 2020, 2:40 IST
ಅಕ್ಷರ ಗಾತ್ರ
ಶ್ವೇತ ಭವನದಲ್ಲಿ ಯುಎಇ, ಬ್ರಹೇನ್‌, ಇಸ್ರೇಲ್‌ ಶಾಂತಿ ಒಪ್ಪಂದ; ಟ್ರಂಪ್‌ ನೇತೃತ್ವ
ADVERTISEMENT
""

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಉಪಸ್ಥಿತಿಯಲ್ಲಿ ಇಸ್ರೇಲ್‌, ಬಹ್ರೇನ್‌ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ನಡುವೆ ಶಾಂತಿ ಒಪ್ಪಂದಗಳಿಗೆ ಅಧಿಕೃತ ಚಾಲನೆ ದೊರೆಯಿತು.

'ಇಸ್ರೇಲ್‌, ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಹಾಗೂ ಬಹ್ರೇನ್‌ ರಾಷ್ಟ್ರಗಳು ರಾಜತಾಂತ್ರಿಕ ಕಚೇರಿಗಳನ್ನು ತೆರೆಯಲಿವೆ, ಪರಸ್ಪರ ರಾಯಭಾರಿಗಳು ಇರಲಿದ್ದಾರೆ ಹಾಗೂ ಜೊತೆಯಾಗಿ ಕಾರ್ಯಾಚರಣೆ ನಡೆಸಲಿವೆ. ಅವರೆಲ್ಲರೂ ಗೆಳೆಯರು' ಎಂದು ಶ್ವೇತ ಭವನ ಟ್ವೀಟ್ ಮಾಡಿದೆ.

ಗಲ್ಫ್ ರಾಷ್ಟ್ರಗಳಾದ ಬಹ್ರೇನ್‌ ಮತ್ತು ಯುಎಇ 'ಅಬ್ರಹಾಂ ಒಪ್ಪಂದ' ಸಹಿ ಮಾಡುವ ಮೂಲಕ ಈಜಿಪ್ಟ್‌ ಮತ್ತು ಜೋರ್ಡಾನ್ ಸಾಲಿಗೆ ಸೇರ್ಪಡೆಯಾಗಿವೆ. ಅರಬ್‌ ರಾಷ್ಟ್ರಗಳ ಪೈಕಿ ಆ ಎರಡು ರಾಷ್ಟ್ರಗಳು ಮಾತ್ರವೇ ಇಸ್ರೇಲ್‌ನೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧ ಹೊಂದಿವೆ. ಈಜಿಪ್ಟ್‌ 1971 ರಲ್ಲಿ ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಂಡಿದ್ದರೆ, ಜೋರ್ಡಾನ್‌ 1994 ರಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಆ ಬಳಿಕ ಯಾವುದೇ ಅರಬ್‌ ರಾಷ್ಟ್ರ ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಂಡಿರಲಿಲ್ಲ.

ಶ್ವೇತ ಭವನದಲ್ಲಿ ಯುಎಇ, ಬ್ರಹೇನ್‌, ಇಸ್ರೇಲ್‌ ಶಾಂತಿ ಒಪ್ಪಂದ; ಟ್ರಂಪ್‌ ನೇತೃತ್ವ
ಜೆರುಸಲೆಂನಲ್ಲಿ ಗೋಡೆಯ ಮೇಲೆ ಅಮೆರಿಕ, ಇಸ್ರೇಲ್‌, ಯುಎಇ ಮತ್ತು ಬಹ್ರೇನ್‌ ಬಾವುಟ

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ಬಹ್ರೇನ್‌ ವಿದೇಶಾಂಗ ಸಚಿವ ಅಬ್ದುಲ್ಲಾತಿಫ್‌ ಬಿನ್‌ ರಷೀದ್ ಅಲ್‌ ಝಯಾದಿ ಹಾಗೂ ಯುಎಐ ದೊರೆ ಮೊಹಮ್ಮದ್ ಬಿನ್‌ ಝೈದ್‌ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಿದರು. ಇಂಗ್ಲಿಷ್‌, ಅರಾಬಿಕ್‌ ಹಾಗೂ ಹೀಬ್ರೂ ಮೂರೂ ಭಾಷೆಗಳಲ್ಲಿದ್ದ ಒಪ್ಪಂದಗಳಿಗೆ ಮೂರೂ ರಾಷ್ಟ್ರಗಳ ಪ್ರತಿನಿಧಿಗಳು ಸಹಿ ಮಾಡಿದರು.

ಇತರೆ ಅರಬ್‌ ಹಾಗೂ ಮುಸ್ಲಿಂ ರಾಷ್ಟ್ರಗಳೂ ಸಹ ಯುಎಇಯ ನಿಲುವು ಮುಂದುವರಿಸುವಂತೆ ಡೊನಾಲ್ಡ್‌ ಟ್ರಂಪ್‌ ಕರೆ ನೀಡಿದರು.

'ಇಸ್ರೇಲ್‌ ಮತ್ತು ನೆರೆಯ ರಾಷ್ಟ್ರಗಳ ನಡುವಿನ ಸಂಬಂಧ ಸಹಜ ಸ್ಥಿತಿಗೆ ತರಲುವಲ್ಲಿ ಈ ಒಪ್ಪಂದ ಆರಂಭ ಮಾತ್ರವೇ ಆಗಿದೆ. ನಾವು ಹಲವು ಪ್ರಬಲ, ಅತ್ಯುತ್ತಮ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ, ಜನರು ಮಧ್ಯ ಪ್ರಾಚ್ಯ ಶಾಂತಿಯುತವಾಗಿರುವುದನ್ನು ಕಾಣಲು ಬಯಸುತ್ತಿದ್ದಾರೆ. ಇದರೊಂದಿಗೆ ಇನ್ನಷ್ಟು ರಾಷ್ಟ್ರಗಳು ಮುಂದೆ ಬರುವ ಸಾಧ್ಯತೆ ಇದೆ, ಆದರೆ ಈಗ ನಡೆದಿರುವುದು 25 ವರ್ಷಗಳಲ್ಲಿ ಇದೇ ಮೊದಲು' ಎಂದು ಟ್ರಂಪ್‌ ಹೇಳಿದರು.

ಪ್ರಸ್ತುತ ಒಪ್ಪಂದದಿಂದಾಗಿ ಮುಸ್ಲಿಮರಿಗೆ ಇಸ್ರೇಲ್‌ನಲ್ಲಿ ಬಹು ಮುಖ್ಯವಾದ ಐತಿಹಾಸಿಕ ಸ್ಥಳಿಗಳಿಗೆ ಭೇಟಿ ನೀಡುವುದು ಸಾಧ್ಯವಾಗಲಿದೆ. ಹಲವು ಜನರು ಬಹಳಷ್ಟು ವರ್ಷಗಳಿಂದ ಅದಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ಪ್ಯಾಲೆಸ್ಟೀನ್‌ ಜತೆಗಿನ ಸಂಘರ್ಷವನ್ನು ನಿಲ್ಲಿಸದೆ ಇಸ್ರೇಲ್‌ನೊಂದಿಗೆ ಯಾವುದೇ ಒಪ್ಪಂದ ಸಾಧ್ಯವಿಲ್ಲ ಎಂಬ ನಿಲುವನ್ನು ಬಹುತೇಕ ಅರಬ್‌ ರಾಷ್ಟ್ರಗಳು ಹೊಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT