ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ್‌ಮೊನೆಲ್ಲಾ ಸೋಂಕು: ಬೆಲ್ಜಿಯಂನಲ್ಲಿ ಕಿಂಡರ್‌ ಚಾಕೋಲೆಟ್‌ ಕಾರ್ಖಾನೆ ಬಂದ್‌

Last Updated 9 ಏಪ್ರಿಲ್ 2022, 11:32 IST
ಅಕ್ಷರ ಗಾತ್ರ

ಬ್ರಸೆಲ್ಸ್‌: ಯುರೋಪ್‌ನ ಹಲವುರಾಷ್ಟ್ರಗಳು ಮತ್ತುಅಮೆರಿಕದಲ್ಲಿ ಸಾಲ್‌ಮೊನೆಲ್ಲಾ ಬ್ಯಾಕ್ಟಿರಿಯಾ ಸೋಂಕು ಪ್ರಕರಣಗಳು ವರದಿಯಾಗಲು ಇಟಲಿಯ ಫೆರೆರೊ ಸಂಸ್ಥೆಯ ಕಿಂಡರ್‌ ಚಾಕೋಲೆಟ್‌ಗಳು ಕಾರಣ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ಕಾರ್ಖಾನೆಗಳನ್ನು ಮುಚ್ಚಲು ಬೆಲ್ಜಿಯಂ ಸರ್ಕಾರ ಶುಕ್ರವಾರ ಆದೇಶಿಸಿದೆ.

'ಪರಿಶೀಲನೆಯ ವೇಳೆ ಕಿಂಡರ್‌ ಮಿಠಾಯಿ ತಯಾರಕ ಸಂಸ್ಥೆಫೆರೆರೊ ನೀಡಿರುವ ಮಾಹಿತಿಯು ಅಪೂರ್ಣ ಎಂಬುದು ಗೊತ್ತಾಗಿದೆ. ಹೀಗಾಗಿ, ಕಾರ್ಖಾನೆಗಳನ್ನು ಮುಚ್ಚಲು ಆದೇಶಿಸಲಾಗಿದೆ' ಎಂದು ಬೆಲ್ಜಿಯಂನ ಆಹಾರ ಸುರಕ್ಷತಾ ಪ್ರಾಧಿಕಾರ ಎಎಫ್‌ಎಸ್‌ಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಫೆರೆರೊ ಕಂಪನಿಯ ಕಿಂಡರ್ ಬ್ರ್ಯಾಂಡ್‌ನ ಸಂಪೂರ್ಣ ಉತ್ಪನ್ನಗಳನ್ನೂ ಹಿಂದಕ್ಕೆ ಪಡೆಯುವಂತೆಯೂಪ್ರಾಧಿಕಾರ ಆದೇಶಿಸಿದೆ. ಈಸ್ಟರ್ ರಜಾ ಋತುವಿನಲ್ಲಿ ಕಿಂಡರ್‌ಉತ್ಪನ್ನ ಉತ್ತಮ ವ್ಯಾಪಾರ ಕಾಣುತ್ತದೆ. ಆದರೆ, ಕಾರ್ಖಾನೆಗಳ ಬಂದ್‌ ಮತ್ತು ಉತ್ಪನಗಳನ್ನು ಹಿಂಪಡೆಯಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದಫೆರೆರೊಗೆ ಭಾರಿ ಹೊಡೆತ ಬಿದ್ದಂತಾಗಿದೆ.

ಫ್ರಾನ್ಸ್‌ನಲ್ಲಿಸಾಲ್‌ಮೊನೆಲ್ಲಾ ಬ್ಯಾಕ್ಟಿರಿಯಾದ 21 ಸೋಂಕು ಪ್ರಕರಣಗಳು ವರದಿಯಾಗಿವೆ.ಇದರಲ್ಲಿ15 ಕಿಂಡರ್ ಉತ್ಪನ್ನಗಳನ್ನು ಸೇವಿಸಿದ್ದಾರೆ ಎಂದುಗೊತ್ತಾಗಿದೆ. ಹೀಗಾಗಿಕಿಂಡರ್‌ ಚಾಕೋಲೆಟ್‌ಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಫ್ರೆಂಚ್ ಸಾರ್ವಜನಿಕ ಆರೋಗ್ಯ ಸೇವೆ ತಿಳಿಸಿದೆ.

ಬ್ರಿಟನ್‌ನಲ್ಲಿಯೂ 63 ಸಾಲ್‌ಮೊನೆಲ್ಲಾ ಪ್ರಕರಣಗಳು ವರದಿಯಾಗಿವೆ.

ಸಾಲ್‌ಮೊನೆಲ್ಲಾ ಎಂಬುದು ಬ್ಯಾಕ್ಟೀರಿಯ.ಅದು ಅತಿಸಾರ, ಜ್ವರ, ಹೊಟ್ಟೆ ನೋವು ಸೇರಿದಂತೆ ಹಲವು ಬಗೆಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಆಹಾರದ ಮೂಲಕವೇ ಈ ಸೋಂಕುಹರಡುತ್ತದೆಎಂದು ತಜ್ಞರು ಹೇಳಿದ್ದಾರೆ.

ಕ್ಷಮೆ ಯಾಚಿಸಿದ ಫೆರೆರೊ

ಸಾಲ್‌ಮೊನೆಲ್ಲಾಬ್ಯಾಕ್ಟೀರಿಯಾ ಸೋಂಕಿನ ಕಾರಣಕ್ಕಾಗಿ ಫೆರೆರೊ ಕ್ಷಮೆ ಯಾಚಿಸಿದೆ. ಅಂತರಿಕ ವೈಫಲ್ಯವನ್ನು ನಾವು ಒಪ್ಪಿಕೊಳ್ಳುತ್ತೇವೆ. ಇದಕ್ಕಾಗಿ ನಾವು ಹೃದಯಾಂತರಾಳದಿಂದ ಕ್ಷಮೆ ಕೋರುತ್ತೇವೆ ಎಂದು ಫೆರೆರೊ ಹೇಳಿದೆ.

'ಮಾರುಕಟ್ಟೆಗೆಗೆಬಿಡುಗಡೆಯಾದ ಕಿಂಡರ್ ಉತ್ಪನ್ನಗಳಲ್ಲಿ ಸಾಲ್ಮೊನೆಲ್ಲಾ ಇರಲಿಲ್ಲ. ಆದರೆ ಸಾಲ್ಮೊನೆಲ್ಲಾ ಸೋಂಕು ಪತ್ತೆಯಾದ ಬೆಲ್ಜಿಯಂನಲ್ಲಿ ಅವುಗಳನ್ನು ತಯಾರಿಸಿದ ಕಾರಣ ಚಾಕೋಲೆಟ್‌ ಉತ್ಪನ್ನಗಳನ್ನು ಹಿಂದಕ್ಕೆ ಪಡೆಯಲುನಿರ್ಧಾರಿಸಲಾಗಿದೆ' ಎಂದು ಫೆರೆರೊ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT