ಮಂಗಳವಾರ, ಆಗಸ್ಟ್ 16, 2022
21 °C
ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್‌

ಹಿಂದೆಂದೂ ಕಾಣದ ವೈವಿಧ್ಯ ನನ್ನ ಆಡಳಿತದಲ್ಲಿ ಕಾಣಬಹುದು: ಜೋ ಬೈಡನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ನಮ್ಮ ಸರ್ಕಾರದಲ್ಲಿ ಸಚಿವ ಸಂಪುಟ, ಶ್ವೇತಭವನದ ಕಚೇರಿ ಸೇರಿದಂತೆ ಆಡಳಿತದ ಎಲ್ಲ ವಿಭಾಗದಲ್ಲೂ ಹಿಂದೆಂದೂ ಕಾಣದ ವೈವಿಧ್ಯವನ್ನು ನೋಡಬಹುದು’ ಎಂದು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಹೇಳಿದ್ದಾರೆ.

ಇತ್ತೀಚೆಗೆ ಆಫ್ರಿಕನ್‌– ಅಮೆರಿಕನ್ ಸಮುದಾಯದವರು ಸೇರಿದಂತೆ, ಕೆಲವು ಗುಂಪುಗಳು, ‘ಹೊಸ ಆಡಳಿತದಲ್ಲಿ ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ’ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ, ಬೈಡನ್ ಅವರು ‘ನಮ್ಮದು ಎಲ್ಲರನ್ನೊಳಗೊಂಡ ವೈವಿಧ್ಯಮಯ ಆಡಳಿತವಾಗಲಿದೆ‘ ಎಂದು ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವರು ಹೊಸ ಸರ್ಕಾರದಲ್ಲಿ ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ. ನಾನು ಹೇಳುವುದು ಇಷ್ಟೆ; ಒಮ್ಮೆ ಹೊಸ ಆಡಳಿತದ ಎಲ್ಲ ಚಟುವಟಿಕೆಗಳೂ ಪೂರ್ಣಗೊಳ್ಳಲಿ. ಆ ನಂತರ ನಮ್ಮ ಆಡಳಿತ ಎಷ್ಟು ವೈವಿಧ್ಯಮಯವಾಗಿದೆ ಎಂಬುದು ಗೊತ್ತಾಗುತ್ತದೆ‘ ಎಂದು ಹೇಳಿದ್ದಾರೆ.

‘ನಮ್ಮ ಆಡಳಿತದಲ್ಲಿ ಎಲ್ಲ ವರ್ಗದವರೂ ಇರುತ್ತಾರೆ. ಆದರೆ, ಯಾವ ಇಲಾಖೆಯಲ್ಲಿ ಏನು ಮಾಡುತ್ತೇನೆಂದು ಈಗ ನಿಖರವಾಗಿ ಹೇಳಲು ಆಗುವುದಿಲ್ಲ. ನಮ್ಮ ಆಡಳಿತದಲ್ಲಿ ಅಮೆರಿಕದಲ್ಲಿರುವ ಲಿಂಗ, ವರ್ಣ, ಸಮುದಾಯ ಆಧಾರಿತವಾಗಿ ಎಲ್ಲರಿಗೂ ಪ್ರಾತಿನಿಧ್ಯ ಸಿಗಲಿದೆ ಎಂದು ಭರವಸೆ ನೀಡುತ್ತೇನೆ‘ ಎಂದು ಜೋ ಬೈಡನ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು