ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ–ಇಸ್ರೇಲ್‌ ಕದನ ವಿರಾಮ ಘೋಷಣೆಗೆ ವಿಶ್ವಸಂಸ್ಥೆಯ ಪ್ರಮುಖರಿಂದ ಒತ್ತಡ

Last Updated 17 ಮೇ 2021, 6:35 IST
ಅಕ್ಷರ ಗಾತ್ರ

ಜೆರುಸಲೇಂ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಮುಸ್ಲಿಂ ನಾಯಕರು, ಸಚಿವರು ಭಾನುವಾರ ತುರ್ತು ಸಭೆಯನ್ನು ನಡೆಸಿದರು. ಈ ವೇಳೆ ಇಸ್ರೇಲ್‌ ಮತ್ತು ಹಮಾಸ್‌ನ ಬಂಡುಕೋರರಲ್ಲಿ ಸಂಘರ್ಷವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಇಸ್ರೇಲ್‌ಗೆ ಕದನ ವಿರಾಮ ಘೋಷಿಸುವಂತೆ ಅಮೆರಿಕ ಒತ್ತಡ ಹೇರಬೇಕು ಎಂದು ಹಲವು ರಾಜತಾಂತ್ರಿಕ ಅಧಿಕಾರಿಗಳು ಅಧ್ಯಕ್ಷ ಜೋ ಬೈಡನ್‌ ಆಡಳಿತವನ್ನು ಒತ್ತಾಯಿಸಿದ್ದಾರೆ. ಆದರೆ ಜೋ ಬೈಡನ್‌ ಅವರು ಮಾತ್ರ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್‌–ಗ್ರೀನ್‌ಫೀಲ್ಡ್‌,‘ ಇಸ್ರೇಲ್ ಮತ್ತು ಹಮಾಸ್‌ ಬಂಡುಕೋರರ ನಡುವಿನ ಸಂಘರ್ಷವನ್ನು ನಿಲ್ಲಿಸಲು ಅಮೆರಿಕವು ಸತತವಾಗಿ ಪ್ರಯತ್ನಿಸುತ್ತಿದೆ’ ಎಂದರು.

‘ಈ ಶಸ್ತ್ರಾಸ್ತ್ರ ಸಂಘರ್ಷವು ದಶಕಗಳ ಹಳೆಯ ಇಸ್ರೇಲ್‌–ಪ್ಯಾಲೆಸ್ಟೀನ್ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸಲಿದೆ’ ಎಂದು ಲಿಂಡಾ ಥಾಮಸ್‌ ಎಚ್ಚರಿಕೆ ನೀಡಿದ್ದಾರೆ.

2014ರಿಂದ ಇಸ್ರೇಲ್‌ ಮತ್ತು ಗಾಜಾದ ಹಮಾಸ್‌ನ ಬಂಡುಕೋರರ ನಡುವೆ ಸಂಘರ್ಷವು ಈಗ ಇನ್ನಷ್ಟು ಹೆಚ್ಚಾಗಿದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಬೈಡನ್‌ ಆಡಳಿತವು ತನ್ನ ವಿದೇಶಾಂಗ ನೀತಿಗಳನ್ನು ಮಧ್ಯ ಪ್ರಾಚ್ಯ ಮತ್ತು ಅಫ್ಗಾನಿಸ್ತಾನದಿಂದ ದೂರವಿರಲು ನಿರ್ಧರಿಸಿದೆ. ಅಲ್ಲದೆ ಇಸ್ರೇಲ್‌ ಸಂಘರ್ಷದ ಬಗ್ಗೆ ಹೆಚ್ಚಿನ ಟೀಕೆಗಳನ್ನು ಮಾಡಿಲ್ಲ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT