ಗುರುವಾರ , ಅಕ್ಟೋಬರ್ 29, 2020
28 °C

ಭಾರತ–ಅಮೆರಿಕ ಮೈತ್ರಿಯಿಂದ ಏಷ್ಯಾ ಭದ್ರತೆಗೆ ಬೆದರಿಕೆ: ಆತಂಕದಲ್ಲಿ ಚೀನಾ

ಎಪಿ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ: ಏಷ್ಯಾ ರಾಷ್ಟ್ರಗಳೊಂದಿಗೆ ಅಮೆರಿಕ ವಿವಿಧ ಕ್ಷೇತ್ರಗಳಲ್ಲಿ ಮಾಡಿಕೊಳ್ಳುತ್ತಿರುವ ಒಪ್ಪಂದಗಳ ಮೂಲಕ ಈ ಪ್ರದೇಶಕ್ಕೆ ಭಾರಿ ಬೆದರಿಕೆವೊಡ್ಡುತ್ತಿದೆ ಎಂದು ಚೀನಾ ಮಂಗಳವಾರ ಹೇಳಿದೆ.

ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಪ್ರವಾಸ ಕೈಗೊಂಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ, ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಮಾತನಾಡಿದರು.

‘ಇಂಡೋ–ಪೆಸಿಫಿಕ್‌ ನ್ಯಾಟೊ ಕೂಟವೊಂದನ್ನು ಸ್ಥಾಪಿಸಲು ಅಮೆರಿಕ ಹವಣಿಸುತ್ತಿದೆ. ಆ ಮೂಲಕ ಈ ಭಾಗದ ರಾಷ್ಟ್ರಗಳ ನಡುವೆ ಸಂಘರ್ಷ ಏರ್ಪಡುವಂತೆ ಮಾಡುವುದು, ಭೌಗೋಳಿಕ ಮತ್ತು ರಾಜಕೀಯ ವಿಷಯದಲ್ಲಿ ಪರಸ್ಪರರಲ್ಲಿ ಭಿನ್ನಾಭಿಪ್ರಾಯ ಮೂಡಿಸಲು ಯತ್ನಿಸುತ್ತಿದೆ’ ಎಂದು ಮಲೇಷ್ಯಾದ ವಿದೇಶಾಂಗ ಸಚಿವ ಹಿಷಮ್ಮುದ್ದೀನ್‌ ಹುಸೇನ್‌ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಮೆರಿಕ ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುವ ಕಾರ್ಯತಂತ್ರವೇ ಈ ಭಾಗದ ಭದ್ರತೆಗೆ ಭಾರಿ ಬೆದರಿಕೆವೊಡ್ಡಲಿದೆ. ಅಮೆರಿಕದ ಈ ನಡೆ ಶೀತಲ ಸಮರದ ದಿನಗಳನ್ನು ನೆನಪಿಸುವುದು’ ಎಂದರು.

‘ದಕ್ಷಿಣ ಚೀನಾ ಸಮುದ್ರದ ವಿದ್ಯಮಾನಗಳಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುವ ಬಾಹ್ಯ ಶಕ್ತಿಗಳನ್ನು ಹೊರಹಾಕಿ’ ಎಂದೂ ಹೇಳಿದರು.

‘ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದವನ್ನು ಶಾಂತಿಯುತವಾಗಿ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು‘ ಎಂದು ಹಿಷಮ್ಮುದ್ದೀನ್‌ ಪ್ರತಿಪಾದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು