ಬೀಜಿಂಗ್: ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ತೈವಾನ್ ಭೇಟಿ ಬೆನ್ನಲ್ಲೇ ವ್ಯಗ್ರಗೊಂಡಿರುವ ನೆರೆಯ ಚೀನಾವು ತೈವಾನ್ ಮೇಲೆ ಆಮದು ಮತ್ತು ರಫ್ತು ನಿರ್ಬಂಧ ಹೇರಿದೆ.

ತೈವಾನ್‌ಗೆ ನೈಸರ್ಗಿಕ ಮರಳು ರಫ್ತು ರದ್ದು ಮಾಡಿರುವ ಚೀನಾ, ಹಣ್ಣುಗಳು ಮತ್ತು ಮೀನು ಉತ್ಪನ್ನಗಳ ಆಮದನ್ನು ತಡೆ ಹಿಡಿದಿದೆ.

ನ್ಯಾನ್ಸಿ ಭೇಟಿಗೂ ಮುನ್ನವೇ ಎಚ್ಚರಿಕೆಯ ಭಾಗವಾಗಿ ಸೋಮವಾರದಿಂದ, ತೈವಾನ್‌ನಿಂದ ಬಿಸ್ಕೆಟ್, ಪೇಸ್ಟ್ರೀಸ್ ಸೇರಿದಂತೆ ತೈವಾನ್‌ನ 35 ರಫ್ತುದಾರರಿಗೆ ಚೀನಾ ಕಸ್ಟಮ್ ಅಧಿಕಾರಿಗಳು ಕೊಕ್ಕೆ ಹಾಕಿದ್ದರು.

ಜನವರಿ–ಜೂನ್‌ವರೆಗೆ ತೈವಾನ್‌ನಿಂದ ಚೀನಾದ ಆಮದು ಮೌಲ್ಯ ಸುಮಾರು 122.5 ಬಿಲಿಯನ್ ಡಾಲರ್‌ನಷ್ಟಾಗಿದೆ. ಇಂಟಿಗ್ರೇಟೆಡ್ ಸರ್ಕ್ಯೂಟ್ಸ್ ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳು ಇದರಲ್ಲಿ ಪ್ರಮುಖವಾಗಿವೆ.

ತೈವಾನ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸಲಾಗುವ ಚೀನಾದ ನೈಸರ್ಗಿಕ ಮರಳಿನ ರಫ್ತನ್ನು ಬುಧವಾರದಿಂದ ರದ್ದುಪಡಿಸಲಾಗಿದೆ ಎಂದು ಅಲ್ಲಿನ ವಾಣಿಜ್ಯ ಸಚಿವಾಲಯ ತಿಳಿಸಿದೆ.

ನಿನ್ನೆ ತೈವಾನ್‌ನ ರಾಜಧಾನಿ ತೈಪೆಗೆ ಬಂದಿಳಿದ ನ್ಯಾನ್ಸಿ ಪೆಲೊಸಿ, ಯಥಾಸ್ಥಿತಿ ಬದಲಿಸುವ ಯಾವುದೇ ಏಕಪಕ್ಷೀಯ ಪ್ರಯತ್ನವನ್ನು ಅಮೆರಿಕ ವಿರೋಧಿಸುತ್ತಲೆ ಬಂದಿದೆ ಎಂದು ಹೇಳಿದ್ದರು.

ಅವರ ಭೇಟಿ ಬೆನ್ನಲ್ಲೇ ತೈವಾನ್ ಜಲಸಂಧಿ ಸುತ್ತಮುತ್ತ ಚೀನಾದ ಯುದ್ಧ ವಿಮಾನಗಳು ಹಾರಾಡುವ ಮೂಲಕ ಆತಂಕ ಸೃಷ್ಟಿಸಿದ್ದವು.

ಚೀನಾ ಬುಧವಾರದಿಂದ ತೈವಾನ್‌ನಿಂದ ಸಿಟ್ರಸ್ ಹಣ್ಣು ಸೇರಿದಂತೆ ಇತರೆ ಪದಾರ್ಥಗಳ ಆಮದನ್ನು ಸ್ಥಗಿತಗೊಳಿಸಿದೆ. ಸಿಟ್ರಸ್ ಹಣ್ಣಿನ ಮೇಲೆ ಕಂಡುಬರುವ ಕೀಟನಾಶಕದಿಂದಾಗಿ ಆಮದು ರದ್ದುಗೊಳಿಸಲಾಗಿದೆ ಎಂದು ಅದು ತಿಳಿಸಿದೆ.

ಸಮುದ್ರಾಹಾರ, ಕಾಫಿ, ಡೈರಿ ಉತ್ಪನ್ನಗಳು, ಪಾನೀಯಗಳು ಮತ್ತು ವಿನೆಗರ್ ತೈವಾನ್‌ನಿಂದ ಚೀನಾ ಆಮದು ಮಾಡಿಕೊಳ್ಳುತ್ತಿದ್ದ ಪ್ರಮುಖ ಪದಾರ್ಥಗಳಾಗಿವೆ.

ಈ ವರ್ಷದ ಆರಂಭದಲ್ಲಿ, ತೈವಾನ್‌ನಿಂದ ಗ್ರೂಪರ್ ಮೀನಿನ ಆಮದನ್ನು ಚೀನಾ ಸ್ಥಗಿತಗೊಳಿಸಿತ್ತು. ಅದರಲ್ಲಿ ನಿಷೇಧಿತ ರಾಸಾಯನಿಕಗಳು ಕಂಡುಬಂದಿವೆ ಎಂದು ಹೇಳಿತ್ತು.

ಕಳೆದ ವರ್ಷ, ಅನಾನಸ್, ಸೇಬು ಆಮದುಗಳನ್ನು ಸ್ಥಗಿತಗೊಳಿಸಲಾಗಿತ್ತು.

ಇವನ್ನೂ ಓದಿ..

ನ್ಯಾನ್ಸಿ ಪೆಲೊಸಿ ಭೇಟಿ ವಿರೋಧಿಸಿ ತೈವಾನ್ ಮೇಲೆ ಚೀನಾದಿಂದ ವ್ಯಾಪಾರ ನಿರ್ಬಂಧ

ಸ್ಪೀಕರ್ ನಾನ್ಸಿ ಪೆಲೊಸಿ ತೈವಾನ್ ಭೇಟಿ: ಅಮೆರಿಕ ಮೇಲೆ ಉತ್ತರ ಕೊರಿಯಾ ಕೆಂಗಣ್ಣು

ಚೀನಾ ಲೆಕ್ಕಿಸದೇ ತೈವಾನ್ ತಲುಪಿದ ಪೆಲೋಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.