ಭಾನುವಾರ, ಸೆಪ್ಟೆಂಬರ್ 27, 2020
27 °C

Covid-19 World Update | 1.95 ಕೋಟಿ ಕೊರೊನಾ ಸೋಂಕಿತರು, 7.22 ಲಕ್ಷ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 1,95,24,066 ಗೆ ಏರಿದ್ದು, 7,22,959 ಮಂದಿ ಮೃತಪಟ್ಟಿದ್ದಾರೆ. 1,25,33,855 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರ್ಡೊಮೀಟರ್‌ ತಿಳಿಸಿದೆ

ಎಂದಿನಂತೆ ಅಮೆರಿಕ 50,95,524 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. ಸದ್ಯ ಅಮೆರಿಕದಲ್ಲಿ 1,64,094 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 26,16,963 ಜನರು ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕ ನಂತರ ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 29,67,064 ಪ್ರಕರಣಗಳು ಪತ್ತೆಯಾಗಿವೆ. 20,68,394 ಸೋಂಕಿತರು ಗುಣಮುಖರಾಗಿದ್ದು, 99,702 ಜನರು ಮೃತಪಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ಮೂರನೇ ಸ್ಥಾನಕ್ಕೇರಿರುವ ಭಾರತದಲ್ಲಿ 20,86,864 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, 14,27,669 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ 42,578 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ರಷ್ಯಾದಲ್ಲಿ 8,77,135, ದಕ್ಷಿಣ ಆಫ್ರಿಕಾದಲ್ಲಿ 5,45,476, ಪೆರುವಿನಲ್ಲಿ 4,63,875, ಮೆಕ್ಸಿಕೊದಲ್ಲಿ 4,62,690, ಚಿಲಿಯಲ್ಲಿ 3,68,825, ಇಂಗ್ಲೆಂಡ್‌ನಲ್ಲಿ 3,09,005, ಇರಾನ್‌ನಲ್ಲಿ 3,22,567 ಮತ್ತು ಸ್ಪೇನ್‌ನಲ್ಲಿ 3,61,442 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಮೆಕ್ಸಿಕೊದಲ್ಲಿ 50,517, ಇಂಗ್ಲೆಂಡ್‌ನಲ್ಲಿ 46,511, ಇಟಲಿಯಲ್ಲಿ 35,190, ಪ್ರಾನ್ಸ್‌ನಲ್ಲಿ 30,324, ಸ್ಪೇನ್‌ನಲ್ಲಿ 28,503, ಪೆರುವಿನಲ್ಲಿ 20,649, ರಷ್ಯಾದಲ್ಲಿ 14,725, ಚಿಲಿಯಲ್ಲಿ 9,958, ದಕ್ಷಿಣ ಆಫ್ರಿಕಾದಲ್ಲಿ 9,909 ಮತ್ತು ಪಾಕಿಸ್ತಾನದಲ್ಲಿ 6,052 ಜನರು ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು