ಭಾನುವಾರ, ಸೆಪ್ಟೆಂಬರ್ 27, 2020
27 °C

Covid-19 World Update| ದಕ್ಷಿಣ ಆಫ್ರಿಕಾದಲ್ಲಿ ಪ್ರಕರಣಗಳ ಕುಸಿತ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೊಹಾನ್ಸ್‌ಬರ್ಗ್‌: ಕಳೆದ ಒಂದು ತಿಂಗಳಿಂದ ಕೊರೊನಾ ವೈರಸ್‌ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ. 

ಆದರೆ, ಭವಿಷ್ಯದಲ್ಲಿ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ. 

ದಕ್ಷಿಣ ಆಫ್ರಿಕಾದಲ್ಲಿ 5,21,318 ಸೋಂಕು ಪ್ರಕರಣಗಳಿದ್ದು, 8,884 ಮಂದಿ ಸಾವಿಗೀಡಾಗಿದ್ದಾರೆ. ಆಗಸ್ಟ್‌ 3ರಂದು 5,377 ಸೋಂಕು ಪ್ರಕರಣಗಳು ಅಲ್ಲಿ ವರದಿಯಾಗಿದ್ದವು. ಆದರೆ, ಆಗಸ್ಟ್‌ 4ರ ವರದಿಯಲ್ಲಿ ಕೊಂಚ ಕುಸಿತವಾಗಿದೆ. 4,456 ಪ್ರಕರಣಗಳು ಪತ್ತೆಯಾಗಿವೆ. 

ಇನ್ನು 47,75,621 ಪ್ರಕರಣಗಳೊಂದಿಗೆ ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್‌ನಲ್ಲಿ  28,01,921 ಪ್ರಕರಣಗಳು, ಭಾರತ 19,08,254, ರಷ್ಯಾ 8,64,948, ದಕ್ಷಿಣ ಆಫ್ರಿಕಾ 5,21,318, ಮೆಕ್ಸಿಕೊ 4,49,961 ಪ್ರಕರಣಗಳಿವೆ. 

ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಮೆಕ್ಸಿಕೊದಲ್ಲಿ ದಿಢೀರ್‌ ಏರಿಕೆಯಾಗಿದೆ. ಅತಿ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳ ಸಾಲಿನಲ್ಲಿ ಮೆಕ್ಸಿಕೊ ಈಗ ಮೂರನೇ ಸ್ಥಾನಕ್ಕೆ ಏರಿದೆ. ಸದ್ಯ ಅಲ್ಲಿ 46,295 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ. ಅಮೆರಿಕದಲ್ಲಿ 1,57,186, ಬ್ರೆಜಿಲ್‌ 95,819 ಸಾವುಗಳು ಸಂಭವಿಸಿವೆ. 

ಕೋವಿಡ್‌ ನಡುವೆ ಶ್ರೀಲಂಕದಲ್ಲಿ ಚುನಾವಣೆ 

ಕೊರೊನಾ ವೈರಸ್‌ ಕಾರಣದಿಂದಾಗಿ ಎರಡು ಬಾರಿ ಮುಂದೂಡಿದ್ದ ಶ್ರೀಲಂಕದ ಸಂಸತ್‌ ಚುನಾವಣೆ ಬುಧವಾರ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮನೆಗಳಿಂದ ಬಂದು ಮತ ಚಲಾವಣೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ರಾಜಪಕ್ಸೆ ಪಕ್ಷ ಶ್ರೀಲಂಕ ಪೀಪಲ್ಸ್‌ ಪಾರ್ಟಿ ಗೆಲ್ಲಬಹುದಾದ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಶ್ರೀಲಂಕದಲ್ಲಿ ಸದ್ಯ 2,838 ಕೋವಿಡ್‌ ಪ್ರಕರಣಗಳಿದ್ದು, 11 ಮಂದಿ ಮೃತಪಟ್ಟಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು