ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯಕ್ಕೆ ಕೋವಿಡ್‌ ಅಂತ್ಯವಾಗದು, ಲಸಿಕೆಗಳಿಂದ ನಿಯಂತ್ರಣ ಸಾಧ್ಯ: ಡಾ. ರಯಾನ್

ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸೇವೆ ಕಾರ್ಯಕ್ರಮಗಳ ನಿರ್ದೇಶಕ ಡಾ. ರಯಾನ್
Last Updated 2 ಮಾರ್ಚ್ 2021, 9:19 IST
ಅಕ್ಷರ ಗಾತ್ರ

ಜಿನಿವಾ: ಈ ವರ್ಷಾಂತ್ಯದೊಳಗೆ ‘ಕೋವಿಡ್‌ 19‘ ಸಾಂಕ್ರಾಮಿಕ ರೋಗ ಹರಡುವುದು ನಿಲ್ಲುತ್ತದೆ ಎನ್ನುವುದು ಅವಾಸ್ತವಿಕ ಹಾಗೂ ಅಪಕ್ವ ಹೇಳಿಕೆಯಾಗುತ್ತದೆ. ಆದರೆ, ಈಗಿರುವ ಪರಿಣಾಮಕಾರಿ ಲಸಿಕೆಗಳು ಸೋಂಕಿತರು ಆಸ್ಪತ್ರಗೆ ದಾಖಲಾಗುವ ಹಾಗೂ ಸಾವಿನ ಪ್ರಮಾಣವನ್ನು‌ ಕಡಿಮೆ ಮಾಡಲು ಅಚ್ಚರಿಯ ರೀತಿಯಲ್ಲಿ ನೆರವಾಗುತ್ತವೆ‘ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸೇವೆಗಳ ಕಾರ್ಯಕ್ರಮ ನಿರ್ದೇಶಕ ಡಾ. ಮೈಖೆಲ್ ರಯಾನ್ ಅಭಿಪ್ರಾಯಪಟ್ಟರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ‘ಸದ್ಯ ಜಗತ್ತಿನ ಎಲ್ಲ ರಾಷ್ಟ್ರಗಳು ಸಾಧ್ಯವಾ ದಷ್ಟೂ ಕೋವಿಡ್‌ 19 ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸುವ ಕಡೆ ಚಿಂತಿಸಬೇಕಾದ ಅಗತ್ಯವಿದೆ‘ ಎಂದು ಹೇಳಿದ್ದಾರೆ.

‘ನಾವು ತುಸು ಜಾಗ್ರತೆಯಿಂದ ಇದ್ದರೆ, ಈ ವರ್ಷಾಂತ್ಯದವರೆಗೆ ರೋಗಿಗಳು ಆಸ್ಪತ್ರೆಗೆ ಸೇರುವುದನ್ನು, ಸೋಂಕಿನಿಂದ ಸಾವನ್ನಪ್ಪುವಂತಹ ದುರಂತಗಳನ್ನು ತಪ್ಪಿಸಬಹುದು‘ ಎಂದು ಅವರು ಹೇಳಿದರು.

‘ಈಗ ಬಿಡುಗಡೆಯಾಗುತ್ತಿರುವ ಕೋವಿಡ್‌ ಲಸಿಕೆಗಳು ಕೊರೊನಾ ಸೋಂಕು ವೇಗವಾಗಿ ಸ್ಫೋಟಗೊಳ್ಳುವುದನ್ನು ತಡೆಯುತ್ತವೆ ಎಂದು ಈಗ ದೊರತಿರುವ ದತ್ತಾಂಶಗಳಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಭರವಸೆ ನೀಡಲಾಗಿದೆ‘ ಎಂದು ರಯಾನ್ ತಿಳಿಸಿದರು.

‘ಲಸಿಕೆಗಳು ಸಾವಿನ ಪ್ರಮಾಣ ತಗ್ಗಿಸಿ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣವನ್ನು ಕಡಿಮೆಗೊಳಿಸಿ, ಗಂಭೀರ ಕಾಯಿಲೆಗಳು ಹರಡುವುದರ ಮೇಲೂ ಪರಿಣಾಮ ಬೀರುವುದಾದರೆ, ಆಗ, ನಾವು ಸೋಂಕು ನಿಯಂತ್ರಣ ಪ್ರಕ್ರಿಯೆಗೆ ವೇಗವನ್ನು ಹೆಚ್ಚಿಸಲು ಆದ್ಯತೆ ನೀಡುವ ವಿಶ್ವಾಸವಿದೆ‘ ಎಂದು ರಯಾನ್ ಹೇಳಿದರು.

ಇದೇ ವೇಳೆ, ‘ರೂಪಾಂತರಗೊಳ್ಳುತ್ತಿರುವ ಕೊರೊನಾವೈರಸ್‌ ವಿರುದ್ಧ ಈ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದರ ಬಗ್ಗೆ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ‘ ಎಂದು ಸ್ಪಷ್ಟಪಡಿಸಿದ ಅವರು, ‘ಸದ್ಯ ಕೊರೊನಾ ಸೋಂಕು ಹರಡುವಿಕೆ ತುಂಬಾ ನಿಯಂತ್ರಣದಲ್ಲಿದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT