ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಮೇಲೆ ದೋಷಾರೋಪಣೆ: ಪೋರ್ನ್ ಸ್ಟಾರ್ ಸ್ಟಾರ್ಮಿ ಡ್ಯಾನಿಯಲ್ಸ್ ಹೇಳಿದ್ದೇನು?

Last Updated 31 ಮಾರ್ಚ್ 2023, 5:48 IST
ಅಕ್ಷರ ಗಾತ್ರ

ನ್ಯೂಯಾರ್ಕ್: ನೀಲಿಚಿತ್ರ ತಾರೆಗೆ ಹಣ ಪಾವತಿ ಮಾಡಿರುವ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಸಲ್ಲಿಸಿದೆ. ಈ ಕುರಿತಂತೆ ನೀಲಿ ಚಿತ್ರ ತಾರೆ ಸ್ಟಾರ್ಮಿ ಡ್ಯಾನಿಯಲ್ಸ್ ಎರಡು ಪದಗಳಲ್ಲಿ ಉತ್ತರಿಸಿದ್ದಾರೆ.

ಈ ಹೋರಾಟದಲ್ಲಿ ಬೆಂಬಲಿಸಿದ ಮತ್ತು ಪ್ರೀತಿ ಕೊಟ್ಟ ಎಲ್ಲರಿಗೂ ಧನ್ಯವಾದಗಳು. ನಾನು ಪ್ರತಿಕ್ರಿಯಿಸಲು ಸಾಧ್ಯವಾಗದಷ್ಟು ಸಂದೇಶಗಳು ಬರುತ್ತಿವೆ. ಅಲ್ಲದೆ, ಆ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ.

‘ಸಂತೋಷಕ್ಕೆ ಯಾವುದೇ ಕಾರಣವಿಲ್ಲ, 'ಗ್ರ್ಯಾಂಡ್ ಜ್ಯೂರಿಗಳ ಕಠಿಣ ಪರಿಶ್ರಮ ಮತ್ತು ಆತ್ಮಸಾಕ್ಷಿಯನ್ನು ಗೌರವಿಸಬೇಕು. ಈಗ ಸತ್ಯ ಮತ್ತು ನ್ಯಾಯಕ್ಕೆ ಜಯವಾಗಲಿ. ಯಾರೂ ಕಾನೂನಿಗಿಂತ ದೊಡ್ಡವರಲ್ಲ’ಎಂದು ಸ್ಟಾರ್ಮಿ ಪರ ವಕೀಲ ಕ್ಲಾರ್ಕ್ ಬ್ರೀವ್‌ಸ್ಟರ್ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಅನ್ನೂ ರೀಟ್ವೀಟ್ ಮಾಡಿರುವ ಸ್ಟಾರ್ಮಿ ಡ್ಯಾನಿಯಲ್ಸ್, ವಕೀಲರಿಗೆ ಧನ್ಯವಾದ ಹೇಳಿದ್ದಾರೆ.

ನಟಿ ಹಲವು ವರ್ಷಗಳಿಂದ ಟ್ರಂಪ್ ಜೊತೆಗಿನ ಸಂಬಂಧ ಕುರಿತಾದ ವಿವಾದದಲ್ಲಿ ಸಿಲುಕಿದ್ದಾರೆ. 2006ರ ಬೇಸಿಗೆಯಲ್ಲಿ ನಾವಿಬ್ಬರೂ ಲೈಂಗಿಕ ಸಂಬಂಧ ಹೊಂದಿದ್ದೆವು ಎಂದು 2018ರಲ್ಲಿ ಸ್ಟಾರ್ಮಿ ಆರೋಪಿಸಿದ್ದರು.

ಆ ನಂತರ ಟ್ರಂಪ್ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಬೆಂಬಲಿಗರು, ಸ್ಟಾರ್ಮಿ ಅವರನ್ನು ತೀವ್ರವಾಗಿ ಅವಮಾನಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT