ಮಂಗಳವಾರ, ಮೇ 18, 2021
24 °C

ಈಜಿಪ್ಟ್‌ನಲ್ಲಿ ಹಳಿ ತಪ್ಪಿದ ರೈಲು: 11 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಕೈರೋ: ‘ಉತ್ತರ ಕೈರೋದಲ್ಲಿ ಭಾನುವಾರ ರೈಲೊಂದು ಹಳಿ ತಪ್ಪಿ, 11 ಮಂದಿ ಮೃತಪಟ್ಟಿದ್ದಾರೆ ’ಎಂದು ಈಜಿಪ್ಟ್‌ನ ಅಧಿಕಾರಿಗಳು ತಿಳಿಸಿದರು.

‘ಈಜಿಪ್ಟ್‌ ರಾಜಧಾನಿ ಕೈರೋದಿಂದ ಮನೌರಾದ ನೈಲ್ ಡೆಲ್ಟಾ ನಗರದತ್ತ ರೈಲು ಪ್ರಯಣಿಸುತ್ತಿತ್ತು. ಈ ವೇಳೆ ಕಲ್ಯುಬಿಯಾ ಪ್ರಾಂತ್ಯದ ಬನ್ಹಾ ನಗರದ ಬಳಿ ರೈಲಿನ ಆರು ಬೋಗಿಗಳು ಹಳಿ ತಪ್ಪಿವೆ’ ಎಂದು ಅಧಿಕಾರಿಗಳು ಹೇಳಿದರು.

‘60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರ ಮೂಳೆಗಳು ಮುರಿದು ಹೋಗಿವೆ. ಸ್ಥಳಕ್ಕೆ 60 ಆಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ. ಜತೆಗೆ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ. 

ಈಜಿಪ್ಟ್‌ನಲ್ಲಿ ಆಗಾಗ ರೈಲು ಅಪಘಾತಗಳು ಸಂಭವಿಸುತ್ತಲೇ ಇದ್ದು, ಮೂರು ವಾರಗಳ ಹಿಂದೆ ಎರಡು ರೈಲುಗಳು ಡಿಕ್ಕಿ ಹೊಡೆದುದರಿಂದ 18 ಮಂದಿ ಸತ್ತಿದ್ದರು.

ಇದನ್ನೂ ಓದಿ... ಮ್ಯಾನ್ಮಾರ್‌ನಲ್ಲಿ ಜಪಾನ್ ಪತ್ರಕರ್ತನ ಬಂಧನ: ಬಿಡುಗಡೆ ಮಾಡುವಂತೆ ಒತ್ತಾಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು