ಮೆಕ್ಸಿಕೊ: ಮೆಕ್ಸಿಕೊದ ಅಕಾಪುಲ್ಕೊದ ಪೆಸಿಫಿಕ್ ಕೋಸ್ಟ್ ರೆಸಾರ್ಟ್‌ನ ಬಾರ್‌ನಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ.

ಗುಂಡಿನ ದಾಳಿ ನಡೆಸಿದ ಶಂಕೆ ಮೇರೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಮೂವರು ಬಾರ್‌ನ ಒಳಗಡೆ ಮತ್ತು ಇಬ್ಬರು ಹೊರಗಡೆ ಅಥವಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕಾಪುಲ್ಕೊದ ಮತ್ತೊಂದು ಪ್ರದೇಶದಲ್ಲಿ ಸಂಭವಿಸಿದ ಗುಂಡಿನ ದಾಳಿಯಲ್ಲಿ ಮತ್ತೆ ಮೂವರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರ ಮತ್ತು ಅಪರಾಧ ಕೃತ್ಯಗಳಿಂದಾಗಿ ಕಳೆದ ಕೆಲ ವರ್ಷಗಳಿಂದ ಅಕಾಪುಲ್ಕೊದ ಘನತೆಗೆ ಧಕ್ಕೆ ಬಂದಿದೆ. ಅಕಾಪುಲ್ಕೊ ಮೆಕ್ಸಿಕೊ ನಿವಾಸಿಗಳಿಗೆ ಮುಖ್ಯ ಸ್ಥಳವಾಗಿದೆ.

ವಾರಾಂತ್ಯದಲ್ಲಿ ಅಕಾಪುಲ್ಕೊ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿರಲಿದ್ದು, ದರೋಡೆ ಕೃತ್ಯಗಳು ಹೆಚ್ಚಿವೆ ಎಂಬ ವರದಿಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಕಾರುಗಳನ್ನು ನಿಲ್ಲಿಸಲು ಕಳ್ಳರು ಮೇಲ್ಸೇತುವೆಗಳಿಂದ ಕಲ್ಲುಗಳನ್ನು ಎಸೆಯುತ್ತಾರೆ ಮತ್ತು ಹೆದ್ದಾರಿಯಲ್ಲಿ ಟೈರ್‌ಗಳ ರಾಶಿ ಹಾಕುತ್ತಾರೆ ಎಂದು ಬೈಕ್ ಚಾಲಕರೊಬ್ಬರು ಹೇಳಿದ್ದಾರೆ.

ನೆರೆಯ ಮೈಕೋವಾಕನ್ ರಾಜ್ಯದ ಉರುಪಾನ್ ನಗರದ ಬಳಿ ಐದು ಪುರುಷರ ಅರ್ಧ ಸಮಾಧಿ ಮಾಡಿರುವ ಶವಗಳು ಪತ್ತೆಯಾಗಿವೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ..

ಸ್ಥಳೀಯ ಮಾದಕ ವಸ್ತುವಿನ ಚಟ ಬಿಡಿಸುವ ಕೇಂದ್ರದಿಂದ ಐವರು ತಿಂಗಳಿಂದ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.