ಶನಿವಾರ, ಮೇ 21, 2022
22 °C

ರಷ್ಯಾ ಆಕ್ರಮಣದಿಂದ ಉಕ್ರೇನ್ ತೊರೆದ 50 ಲಕ್ಷಕ್ಕೂ ಅಧಿಕ ಮಂದಿ- ವಿಶ್ವಸಂಸ್ಥೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಜಿನೆವಾ: ಫೆಬ್ರುವರಿ 24 ರಂದು ರಷ್ಯಾದ ಆಕ್ರಮಣದ ನಂತರ 50 ಲಕ್ಷಕ್ಕೂ ಅಧಿಕ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಶುಕ್ರವಾರ ವಿಶ್ವಸಂಸ್ಥೆಯ ಅಂಕಿಅಂಶಗಳಿಂದ ತಿಳಿದುಬಂದಿದೆ.

ವಿಶ್ವಸಂಸ್ಥೆಯ ನಿರಾಶ್ರಿತರ ಆಯೋಗ (ಯುಎನ್‌ಎಚ್‌ಸಿಆರ್‌) ನೀಡಿರುವ ಮಾಹಿತಿ ಪ್ರಕಾರ, 47,96,245 ಜನರು ಉಕ್ರೇನ್‌ನ ಗಡಿಯುದ್ದಕ್ಕೂ ಪಲಾಯನ ಮಾಡಿದ್ದಾರೆ ಎಂದು ಹೇಳಿದೆ.

ಆದರೆ, ವಿಶ್ವಸಂಸ್ಥೆಯ ಇಂಟರ್‌ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್ ಪ್ರಕಾರ, ಉಕ್ರೇನ್‌ ಜನರು ಮಾತ್ರವಲ್ಲದೆ ಸುಮಾರು 2,15,000 ಬೇರೆ ರಾಷ್ಟ್ರದ ಪ್ರಜೆಗಳೂ ಸಹ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದಿದೆ.

ಫೆಬ್ರುವರಿ 24 ರಂದು ರಷ್ಯಾ ಹತ್ತು ಸಾವಿರ ಸೈನಿಕರನ್ನು ಉಕ್ರೇನ್‌ಗೆ ಕಳುಹಿಸಿತು. ಉಕ್ರೇನ್‌ನ ಮಿಲಿಟರಿ ಸಾಮರ್ಥ್ಯವನ್ನು ದಮನ ಮಾಡಲು ಮತ್ತು ಅಲ್ಲಿನ ಅಪಾಯಕಾರಿ ರಾಷ್ಟ್ರೀಯತಾವಾದಿಗಳನ್ನು ಬೇರುಸಹಿತ ಕಿತ್ತುಹಾಕಲು ಕೈಗೊಂಡ ವಿಶೇಷ ಕಾರ್ಯಾಚರಣೆ ಎಂದು ರಷ್ಯಾ ಕರೆದಿತ್ತು.

ಹೀಗಿದ್ದರೂ, ಉಕ್ರೇನ್ ಪಡೆಗಳು ಕಠಿಣ ಪ್ರತಿರೋಧವನ್ನು ಒಡ್ಡುತ್ತಿವೆ ಮತ್ತು ಮಾಸ್ಕೋ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ಪ್ರಯತ್ನದಲ್ಲಿ ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ವ್ಯಾಪಕ ನಿರ್ಬಂಧಗಳನ್ನು ವಿಧಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು