ಭಾನುವಾರ, ಜುಲೈ 3, 2022
24 °C

ಕೋವಿಡ್‌ ಲಸಿಕೆ ಪಡೆದ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಿದ ಫ್ರಾನ್ಸ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಫ್ರಾನ್ಸ್‌ನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿಯಮಗಳಲ್ಲಿ ಸಡಿಲಿಕೆ ತರಲಾಗಿದ್ದು, ಲಸಿಕೆ ಪಡೆದ ವಿದೇಶಿ ಪ್ರವಾಸಿಗರನ್ನು ಫ್ರಾನ್ಸ್‌ ಸ್ವಾಗತಿಸಿದೆ.

ಇದು ಬುಧವಾರದಿಂದ ಜಾರಿಗೆ ಬರಲಿದೆ. ಆದರೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ರಾಷ್ಟ್ರಗಳಾದ ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌‍ ಪ್ರವಾಸಿಗರ ‍ಮೇಲೆ ನಿರ್ಬಂಧ ಮುಂದುವರಿಸಲಾಗಿದೆ.

ಅಮೆರಿಕ, ಬ್ರಿಟನ್‌ ಸೇರಿದಂತೆ ಇತರೆ ಹಲವು ರಾಷ್ಟ್ರಗಳ ಲಸಿಕೆ ಪಡೆದ ಪ್ರವಾಸಿಗರನ್ನು ಫ್ರಾನ್ಸ್‌ ಸ್ವಾಗತಿಸಿದ್ದು, ಅವರು ಕ್ವಾರಂಟೈನ್‌ಗೆ ಒಳ‍ಪಡುವ ಅಗತ್ಯವಿಲ್ಲ. ಅಲ್ಲದೆ ತಮ್ಮ ಭೇಟಿಯ ಕಾರಣವನ್ನು ಸಮರ್ಥಿಸಿಕೊಳ್ಳಬೇಕಾಗಿಲ್ಲ. ಆದರೆ ಇತ್ತೀಚಿನ ನೆಗೆಟಿವ್‌ ವರದಿಯನ್ನು ಸಲ್ಲಿಸಬೇಕಾಗುತ್ತದೆ.

ಯುರೋಪಿನ ಲಸಿಕೆ ಪಡೆದ ಪ್ರವಾಸಿಗರು ಪರೀಕ್ಷೆಗೆ ಒಳಪಡುವ ಅಗತ್ಯವೂ ಇಲ್ಲ.

ಇದನ್ನೂ ಓದಿ... ಕೋವಿಡ್‌: ಹಿಮಾಚಲ ಪ್ರದೇಶದ ಬಿಜೆಪಿ ಶಾಸಕ ನರೀಂದರ್‌ ಬರಾಗಟಾ ನಿಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು