ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಒಂದೇ ತಾಸಿನಲ್ಲಿ 48 ಅಂತಸ್ತಿನ ಕಟ್ಟಡವನ್ನು ಏರಿದ 60ರ ಫ್ರೆಂಚ್‌ಮ್ಯಾನ್!

Last Updated 19 ಸೆಪ್ಟೆಂಬರ್ 2022, 9:49 IST
ಅಕ್ಷರ ಗಾತ್ರ

ಪ್ಯಾರಿಸ್‌: ‘ಫ್ರೆಂಚ್‌ ಸ್ಪೈಡರ್‌ಮ್ಯಾನ್‌’ ಎಂದೇ ಕರೆಯಲಾಗುವ ಅಲೈನ್‌ ರಾಬರ್ಟ್‌ ಅವರು ತಮ್ಮ 60ನೇ ವಯಸ್ಸಿನಲ್ಲಿ 48 ಅಂತಸ್ತಿನ ಗಗನಚುಂಬಿ ಕಟ್ಟಡವನ್ನು ಏರಿದ್ದಾರೆ.

ಪ್ಯಾರಿಸ್‌ನ ಲಾ ಡಿಫೆನ್ಸ್‌ ಬ್ಯುಸಿನೆಸ್‌ ಜಿಲ್ಲೆಯಲ್ಲಿರುವ 187 ಮೀಟರ್‌ನ (613 ಅಡಿ) ಟೂರ್‌ ಟೋಟಲ್‌ ಎನರ್ಜೀಸ್‌ ಕಟ್ಟಡವನ್ನು ಕೇವಲ 60 ನಿಮಿಷದಲ್ಲಿರಾಬರ್ಟ್‌ ಏರಿದ್ದಾರೆ. ತಮ್ಮ 60ನೇ ವಯಸ್ಸಿಗೆ ಈ ಕಟ್ಟಡವನ್ನು ಏರಬೇಕೆಂಬ ಗುರಿಯನ್ನಿಟ್ಟುಕೊಂಡಿದ್ದರು.

‘60ನೇ ವಯಸ್ಸು ತಲುಪಿದ ನಂತರವೂ ಸಾಧನೆ ಮಾಡುವುದು ಸಾಧ್ಯ ಎಂಬ ಸಂದೇಶವನ್ನು ಜನರಿಗೆ ರವಾನಿಸಲು ನಾನು ಈ ಕಟ್ಟಡವನ್ನು ಏರಿದೆ. ಈ ವಯಸ್ಸಿನಲ್ಲೂ ನೀವು ಸ್ಪರ್ಧಿಸಬಹುದು, ಸಕ್ರಿಯವಾಗಿರಬಹುದು. ಹಾಗೆಯೇ ಅನೇಕ ಅದ್ಭುತ ಕೆಲಸಗಳನ್ನು ಮಾಡಬಹುದು’ ಎಂದು ರಾಬರ್ಟ್‌ ಹೇಳಿದರು.

ಕಳೆದ ತಿಂಗಳು ಅಲೈನ್‌ ರಾಬರ್ಟ್‌ ಅವರು ತಮ್ಮ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT