ಭಾನುವಾರ, ಜುಲೈ 3, 2022
26 °C

ರಷ್ಯಾ–ಉಕ್ರೇನ್‌ ಯುದ್ಧ ತಪ್ಪಿಸುವ ಕಡೇ ಪ್ರಯತ್ನ ಮಾಡಿದ ಫ್ರಾನ್ಸ್‌ ಅಧ್ಯಕ್ಷ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಪ್ಯಾರಿಸ್‌: ಉಕ್ರೇನ್‌ನ ಮೇಲಿನ ರಷ್ಯಾದ ಆಕ್ರಮಣವನ್ನು ತಡೆಯುವ ಕೊನೆಯ ಪ್ರಯತ್ನವನ್ನು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯಲ್‌ ಮ್ಯಾಕ್ರಾನ್‌ ಭಾನುವಾರ ನಡೆಸಿದರು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಅವರು, ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದರು ಎಂದು ಮ್ಯಾಕ್ರಾನ್‌ ಕಚೇರಿ ತಿಳಿಸಿದೆ.

ಉಕ್ರೇನ್‌ನತ್ತ ಸೇನೆಯನ್ನು ರವಾನಿಸದಂತೆ ಮನವೊಲಿಸಲು ಮ್ಯಾಕ್ರಾನ್‌ ಎರಡು ವಾರಗಳ ಹಿಂದೆ ಮಾಸ್ಕೋಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದಾದ ಎರಡು ತಿಂಗಳ ನಂತರ ಇಬ್ಬರೂ ನಾಯಕರ ನಡುವೆ ಮತ್ತೆ ದೂರವಾಣಿ ಮುಖಾಂತರ ಚರ್ಚೆ ನಡೆದಿದೆ. ಇಬ್ಬರೂ ನಾಯಕರ ನಡುವಿನ ಚರ್ಚೆ ಒಂದೂವರೆ ಗಂಟೆಗಳಿಗೂ ಅಧಿಕ ಕಾಲ ನಡೆಯಿತು ಎಂದು ಮೂಲಗಳು ಹೇಳಿವೆ.

‘ಉಕ್ರೇನ್‌ನಲ್ಲಿನ ಪ್ರಮುಖ ಸಂಘರ್ಷವನ್ನು ತಪ್ಪಿಸುವ ಅಂತಿಮ ಹಾಗೂ ಅಗತ್ಯ ಪ್ರಯತ್ನ’ ಇದಾಗಿದೆ ಎಂದು ಅಧ್ಯಕ್ಷರ ಕಚೇರಿಯ ಅಧಿಕಾರಿಗಳು ಚರ್ಚೆಗೂ ಮುನ್ನ ತಿಳಿಸಿದರು.

‘ರಷ್ಯಾದ ಯಾವುದೇ ಪ್ರಚೋದನೆಗೂ ಪ್ರತಿಕ್ರಿಯಿಸುವುದಿಲ್ಲ, ಸಂವಾದಕ್ಕೆ ನಾವು ಮುಕ್ತರಾಗಿದ್ದೇವೆ’ ಎಂದು ಉಕ್ರೇನ್‌ನ ಅಧ್ಯಕ್ಷ ವ್ಲಾಡಿಮಿರ್‌ ಝೆಲೆನ್‌ಸ್ಕಿ ಶನಿವಾರವಷ್ಟೇ ಹೇಳಿದ್ದರು. ಆದರೆ, ಮ್ಯೂನಿಕ್‌ನಲ್ಲಿ ನಡೆದ ಭದ್ರಾ ಸಮ್ಮೇಳದನದಲ್ಲಿ ಮಾತನಾಡಿದ್ದ ಝೆಲೆನ್‌ಸ್ಕಿ, ‘ಪುಟಿನ್‌ ಅವರನ್ನು ಸಂತೈಸುವುದನ್ನು ಪಾಶ್ಚಾತ್ಯ ರಾಷ್ಟ್ರಗಳು ಬಿಡಬೇಕು’ ಎಂದು ಹೇಳಿದ್ದರು.

ಪುಟಿನ್‌ ಅವರೊಂದಿಗಿನ ಸಭೆಯ ನಂತರ ಮ್ಯಾಕ್ರಾನ್‌ ಅವರು ಝೆಲೆನ್‌ಸ್ಕಿ ಅವರೊಂದಿಗೆ ದೂರವಾಣಿ ಚರ್ಚೆಗೆ ತೆರಳಿದರು ಎಂದು ಫ್ರಾನ್ಸ್‌ ಸರ್ಕಾರದ ಅಧಿಕಾರಿಗಳು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು