ಮಂಗಳವಾರ, ಮಾರ್ಚ್ 21, 2023
27 °C

ಭಾರತ–ಅಮೆರಿಕ 2+2 ಸಭೆ: ವಾಷಿಂಗ್ಟನ್‌ ತಲುಪಿದ ರಾಜನಾಥ್‌ ಸಿಂಗ್‌, ಜೈಶಂಕರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕದ 2+2 ಸಚಿವರ (ಉಭಯ ರಾಷ್ಟ್ರಗಳ ರಕ್ಷಣಾ ಮತ್ತು ವಿದೇಶಾಂಗ ಸಚಿವರ) ಸಭೆಯು ಸೋಮವಾರ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ವಾಷಿಂಗ್ಟನ್‌ ತಲುಪಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಆಡಳಿತಾವಧಿಯಲ್ಲಿ ನಡೆಯುತ್ತಿರುವ ಮೊದಲ 2+2 ಸಚಿವರ ಸಭೆ ಇದಾಗಿದೆ. ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಸಭೆಯ ಮಹತ್ವ ಹೆಚ್ಚಿದೆ. ಉಭಯ ರಾಷ್ಟ್ರಗಳ ಬಾಂಧವ್ಯದ ಸಂಕೇತವಾಗಿರುವ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬೈಡನ್‌ ಅವರು ವರ್ಚುವಲ್‌ ಆಗಿ ಭಾಗಿಯಾಗುತ್ತಿದ್ದಾರೆ.

ರಾಜನಾಥ್‌ ಸಿಂಗ್‌ ಮತ್ತು ಜೈಶಂಕರ್ ಅವರೊಂದಿಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್‌ ಶ್ವೇತ ಭವನದಲ್ಲಿ ಭೇಟಿಯಾಗಲಿದ್ದಾರೆ.

ಇದನ್ನೂ ಓದಿ– 

ಕೋವಿಡ್‌–19 ಸಾಂಕ್ರಾಮಿಕ ತಡೆ, ಹವಾಮಾನ ವೈಪರೀತ್ಯ ಬಿಕ್ಕಟ್ಟು, ಜಾಗತಿಕ ಆರ್ಥಿಕತೆಗೆ ಬಲ ನೀಡುವುದು, ಭದ್ರತೆ, ಪ್ರಜಾಪ್ರಭುತ್ವ, ಇಂಡೊ–ಪೆಸಿಫಿಕ್‌ ವಲಯದಲ್ಲಿ ಏಳಿಗೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೈಡನ್ ಮತ್ತು ಮೋದಿ ಚರ್ಚಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು