ಮಂಗಳವಾರ, ಸೆಪ್ಟೆಂಬರ್ 21, 2021
26 °C

200 ವರ್ಷಗಳಷ್ಟು ಹಳೆಯ ಹಿಂದೂ ದೇಗುಲಕ್ಕೆ ಭೇಟಿ ನೀಡಿದ ಭಾರತದ ವಿದೇಶಾಂಗ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಾಮ (ಬಹ್ರೇನ್): ಬಹ್ರೇನ್‌ನ ಮನಾಮದಲ್ಲಿರುವ 200 ವರ್ಷಗಳಷ್ಟು ಹಳೆಯ ಶ್ರೀನಾಥಜಿ (ಶ್ರೀಕೃಷ್ಣ) ಹಿಂದೂ ದೇಗುಲಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ಭೇಟಿ ನೀಡಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮನಾಮದಲ್ಲಿರುವ 200 ವರ್ಷಗಳ ಹಳೆಯ ಶ್ರೀನಾಥ್‌ಜಿ ದೇವಸ್ಥಾನದಲ್ಲಿನ ದರ್ಶನದೊಂದಿಗೆ ದಿನ ಪ್ರಾರಂಭವಾಯಿತು. ನಮ್ಮೀ ಸಮಯವು ಬಹ್ರೇನ್‌ನೊಂದಿಗಿನ ನಿಕಟ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಜೈಶಂಕರ್ ಅವರು ಸದ್ಯ ನವೆಂಬರ್ 24 ರಿಂದ 25 ರವರೆಗೆ ಎರಡು ದಿನಗಳ ಬಹ್ರೇನ್‌ ಪ್ರವಾಸದಲ್ಲಿದ್ದಾರೆ. ಅವರು ಮಂಗಳವಾರ ಆ ದೇಶದ ವಿದೇಶಾಂಗ ಸಚಿವ ಡಾ.ಅಬ್ದುಲ್‌ಲತೀಫ್ ಬಿನ್ ರಶೀದ್ ಅಲ್ ಜಯಾನಿ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳ ಕುರಿತು ಮಾತುಕತೆ ನಡೆಸಿದ್ದು, ಉಭಯ ದೇಶಗಳ ನಡುವಿನ ವೈವಿಧ್ಯಮಯ ಕ್ಷೇತ್ರಗಳಲ್ಲಿನ ಐತಿಹಾಸಿಕ ಸಂಬಂಧಗಳು ಮತ್ತು ಸಹಕಾರ ಕುರಿತು ಚರ್ಚಿಸಿದ್ದಾರೆ.

'ವಿದೇಶಾಂಗ ಸಚಿವ ಡಾ.ಅಬ್ದುಲ್‌ಲತೀಫ್ ಬಿನ್ ರಶೀದ್ ಅಲ್ ಜಯಾನಿ ಅವರೊಂದಿಗಿನ ಆತ್ಮೀಯ ಸಭೆಯೊಂದಿಗೆ ಬಹ್ರೇನ್ ಭೇಟಿಯು ಪ್ರಾರಂಭವಾಯಿತು. ಮಾಜಿ ಪ್ರಧಾನಿ ಎಚ್ಆರ್‌ಎಚ್ ರಾಜಕುಮಾರ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರ ನಿಧನಕ್ಕೆ ಸಂತಾಪಗಳನ್ನು ಸೂಚಿಸುತ್ತೇನೆ' ಎಂದು ಜೈಶಂಕರ್ ಮಂಗಳವಾರ ತಡವಾಗಿ ಟ್ವೀಟ್ ಮಾಡಿದ್ದರು.

ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ವೈವಿಧ್ಯಮಯ ಕ್ಷೇತ್ರಗಳಲ್ಲಿನ ಸಹಕಾರದ ಕುರಿತು ಚರ್ಚಿಸಲಾಗಿದೆ. ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಅಭಿಪ್ರಾಯಗಳು ವಿನಿಮಯವಾಗಿವೆ. ಕೋವಿಡ್-19 ಸಮಯದಲ್ಲಿ ಭಾರತೀಯ ಸಮುದಾಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಕ್ಕಾಗಿ ಬಹ್ರೇನ್‌ಗೆ ಧನ್ಯವಾದಗಳು' ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು