ಟೋಕಿಯೊ: ಫುಕುಶಿಮಾ ಅಣುವಿದ್ಯುತ್ ಸ್ಥಾವರದಲ್ಲಿ ಹತ್ತು ವರ್ಷಗಳ ಹಿಂದೆ ಸಂಭವಿಸಿದ ದುರಂತದ ಬಳಿಕ ಸ್ಥಗಿತವಾಗಿದ್ದ ಮಿಹಮಾದಲ್ಲಿನ ಅಣುವಿದ್ಯುತ್ ಸ್ಥಾವರವನ್ನು ಕನ್‌ಸೈ ಎಲೆಕ್ಟ್ರಿಕ್ ಪವರ್ ಕಂಪನಿ ಮುಂದಿನ ತಿಂಗಳು ಪುನರಾರಂಭಿಸಲಿದ್ದು, ಅಕ್ಟೋಬರ್ ವೇಳೆಗೆ ಮತ್ತೆ ಸ್ಥಗಿತಗೊಳಿಸಲಿದೆ.

ಜಪಾನ್‌ನಲ್ಲಿ ಇದೀಗ ಬಿರು ಬೇಸಿಗೆ ಇದ್ದು, ವಿದ್ಯುತ್‌ಗೆ ಭಾರಿ ಬೇಡಿಕೆ ಎದುರಾಗಿದೆ. ಇದನ್ನು ನಿಭಾಯಿಸುವ ಸಲುವಾಗಿ 40 ವರ್ಷಗಳಷ್ಟು ಹಳೆಯದಾಗಿರುವ ಮಿಹಿಮಾ ನಂ.3 ಅಣುಸ್ಥಾವರವನ್ನು ಪುನರಾರಂಭಿಸಲಾಗುತ್ತದೆ ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಎಲ್ಲಾ ಅಣುವಿದ್ಯುತ್ ಸ್ಥಾವರಗಳು ಭಯೋತ್ಪಾದನೆ ನಿಗ್ರಹ ಭದ್ರತಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾಗುತ್ತದೆ. ಆದರೆ ಈ ಕಾಲಮಿತಿಯಲ್ಲಿ ಈ ಸುರಕ್ಷತಾ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ. ಹೀಗಾಗಿ ಸುಮಾರು 4 ತಿಂಗಳು ವಿದ್ಯುತ್ ಉತ್ಪಾದಿಸಿದ ಬಳಿಕ ಈ ಅಣುಸ್ಥಾವರ ಮತ್ತೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.