ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಪ್ರಧಾನಿ ಭೇಟಿಯಾದ ಸೇನೆ, ಗುಪ್ತಚರ ಮುಖ್ಯಸ್ಥರು; ಇಮ್ರಾನ್‌ ಭಾಷಣ ರದ್ದು

Last Updated 30 ಮಾರ್ಚ್ 2022, 13:35 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ಪ್ರಕಟಿಸಿದ್ದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಭಾಷಣವನ್ನು ರದ್ದು ಪಡಿಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್‌ ಜಾವೆದ್‌ ಬಾಜ್ವಾ ಮತ್ತು ಗುಪ್ತಚರ ಇಲಾಖೆ ಐಎಸ್‌ಐನ ಡಿಜಿ ಲೆಫ್ಟಿನೆಂಟ್‌ ಜನರಲ್‌ ನದೀಮ್‌ ಅಂಜುಮ್‌ ಅವರು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರವು ಬಹುಮತ ಕಳೆದುಕೊಂಡಿದ್ದು, ಇಮ್ರಾನ್‌ ಅವರು ಸ್ಥಾನದಿಂದ ಕೆಳಗಿಳಿಯುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಮಧ್ಯೆ ಸೇನೆ ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆದಿದ್ದು, ಇಮ್ರಾನ್‌ ಅವರು ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆ ಕರೆದಿದ್ದಾರೆ.

ಇಮ್ರಾನ್‌ ವಿರುದ್ಧ ಅವಿಶ್ವಾಸ ನಿರ್ಣಯದ ಸಂಬಂಧ ಏಪ್ರಿಲ್‌ 3ರಂದು ಸಂಸತ್ತಿನಲ್ಲಿ ಮತ ಹಾಕುವ ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನವೇ ಇಮ್ರಾನ್‌ ಖಾನ್‌ ರಾಜೀನಾಮೆ ನೀಡುವಂತೆ ಪಿಎಂಎಲ್‌–ಎನ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಒತ್ತಾಯಿಸಿವೆ.

ಇಮ್ರಾನ್‌ ಅವರ ಸರ್ಕಾರ ರಚನೆಯಲ್ಲಿ ಸಾಥ್‌ ನೀಡಿದ್ದ ಎಂಕ್ಯುಎಂ ಪಕ್ಷವು ಬುಧವಾರ ಮೈತ್ರಿ ಮುರಿದುಕೊಂಡಿದೆ. ವಿರೋಧ ಪಕ್ಷ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಜೊತೆಗೆ ಕೈಜೋಡಿಸುವುದಾಗಿ ಎಂಕ್ಯುಎಂ ಘೋಷಿಸಿದ್ದು, ಪಕ್ಷದ ಇಬ್ಬರು ಮುಖಂಡರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಎಂಕ್ಯುಎಂ ಬೆಂಬಲ ಕಳೆದುಕೊಳ್ಳುವ ಮೂಲಕ ಇಮ್ರಾನ್‌ ಖಾನ್‌ ಸರ್ಕಾರವು ಸಂಸತ್ತಿನಲ್ಲಿ 164 ಸ್ಥಾನಗಳನ್ನಷ್ಟೇ ಉಳಿಸಿಕೊಂಡಿದೆ. ಅವಿಶ್ವಾಸ ನಿರ್ಣಯದಿಂದ ಉಳಿಯಲು ಇಮ್ರಾನ್‌ ಅವರಿಗೆ ಕನಿಷ್ಠ 172 ಸದಸ್ಯರ ಬೆಂಬಲ ಅವಶ್ಯವಾಗಿದೆ. ಪ್ರಸ್ತುತ ಪಾಕಿಸ್ತಾನ್‌ ತೆಹ್ರೀಕ್‌–ಇ ಇನ್ಸಾಫ್‌ (ಪಿಟಿಐ) ಪಕ್ಷದಲ್ಲಿ 155 ಸದಸ್ಯರು, ಎಂಎನ್ಎ ಮತ್ತು ಪಿಎಂಎಲ್‌(ಕ್ಯು)ನ ನಾಲ್ವರು, ಜಿಡಿಎ ಪಕ್ಷದ ಮೂವರು ಹಾಗೂ ಬಿಎಪಿ ಮತ್ತು ಎಎಂಎಲ್‌ನ ತಲಾ ಒಬ್ಬರು ಸದಸ್ಯರ ಬೆಂಬಲ ಇಮ್ರಾನ್‌ ಅವರಿಗೆ ಉಳಿದಿದೆ.

ಈಗ ವಿರೋಧ ಪಕ್ಷಗಳಿಗೆ ಒಟ್ಟು 175 ಸದಸ್ಯರ ಬಲವಿದೆ. ಬಲೋಚಿಸ್ತಾನ್‌ ಅವಾಮಿ ಪಾರ್ಟಿ (ಬಿಎಪಿ) ಸಹ ಪಿಟಿಐ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆಯುತ್ತಿರುವುದಾಗಿ ಸಂಸತ್ತಿನ ಸ್ಪೀಕರ್‌ಗೆ ಪತ್ರ ಬರೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT