ಗುರುವಾರ , ಅಕ್ಟೋಬರ್ 21, 2021
29 °C

ಭಾರತ– ಅಮೆರಿಕ ನಡುವಣ ಸ್ನೇಹ ಇನ್ನಷ್ಟು ಗಟ್ಟಿಯಾಗಲಿದೆ: ಬೈಡನ್‌ಗೆ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಧ್ಯಕ್ಷ ಜೋ ಬೈಡನ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

‘ಇಂದಿನ ದ್ವಿಪಕ್ಷೀಯ ಮಾತುಕತೆ ಬಹಳ ಮಹತ್ವದ್ದು. ಈ ಶತಮಾನದ ಮೂರನೇ ದಶಕದ ಆರಂಭದಲ್ಲಿ ನಾವು ಮಾತುಕತೆ ನಡೆಸುತ್ತಿದ್ದೇವೆ. ಈ ದಶಕವು ಹೇಗೆ ರೂಪುಗೊಳ್ಳುತ್ತದೆ ಎಂಬುದರಲ್ಲಿ ನಿಮ್ಮ (ಬೈಡನ್) ನಾಯಕತ್ವವು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಭಾರತ ಮತ್ತು ಅಮೆರಿಕ ನಡುವಣ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಲು ಈಗ ಬೀಜವನ್ನು ಬಿತ್ತಲಾಗಿದೆ’ ಎಂದು ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಓದಿ: 

‘ತಂತ್ರಜ್ಞಾನವು ಪ್ರೇರಕ ಇಂದು ಶಕ್ತಿಯಾಗುತ್ತಿದೆ. ಜಾಗತಿಕ ಒಳಿತಿಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಾವು ನಮ್ಮ ಪ್ರತಿಭೆಯನ್ನು ಬಳಸಿಕೊಳ್ಳಬೇಕು’ ಎಂದು ಮೋದಿ ಹೇಳಿದ್ದಾರೆ.

‘ಅಧ್ಯಕ್ಷ ಬೈಡನ್ ಪ್ರಸ್ತಾಪಿಸಿದ ಪ್ರತಿಯೊಂದು ವಿಷಯಗಳೂ ಭಾರತ-ಅಮೇರಿಕ ಸ್ನೇಹದ ವಿಚಾರದಲ್ಲಿ ನಿರ್ಣಾಯಕವಾಗಿವೆ’ ಎಂದು ಮೋದಿ ಹೇಳಿದ್ದಾರೆ.

‘ಬೈಡನ್ ಅವರು ಮಹಾತ್ಮ ಗಾಂಧೀಜಿ ಅವರ ಜಯಂತಿ ಬಗ್ಗೆ ಪ್ರಸ್ತಾಪಿಸಿದರು. ಗಾಂಧೀಜಿ ಅವರು ನಂಬಿಕೆ–ವಿಶ್ವಾಸಗಳ ಬಗ್ಗೆ ಪ್ರತಿಪಾದಿಸಿದ್ದವರು. ಮುಂದಿನ ದಿನಗಳಲ್ಲಿ ಗಾಂಧಿ ತತ್ವವು ಪ್ರಪಂಚಕ್ಕೆ ಬಹಳ ಮಹತ್ವದ್ದಾಗಲಿದೆ’ ಎಂದು ಬೈಡನ್ ಹೇಳಿರುವುದಾಗಿ ಮೋದಿ ತಿಳಿಸಿದರು.

ಓದಿ: 

ಇದಕ್ಕೂ ಮುನ್ನ ಮಾತನಾಡಿದ್ದ ಜೋ ಬೈಡನ್, ‘ಇಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಶ್ವೇತ ಭವನದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದೇನೆ. ಅಮೆರಿಕ–ಭಾರತ ನಡುವಣ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದನ್ನು ಎದುರು ನೋಡುತ್ತಿದ್ದೇನೆ. ಹವಾಮಾನ ಬದಲಾವಣೆಯಿಂದ ತೊಡಗಿ ಕೋವಿಡ್ ಬಿಕ್ಕಟ್ಟಿನ ವರೆಗೆ ಎಲ್ಲ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದೇವೆ’ ಎಂದು ಹೇಳಿದ್ದರು.

ಓದಿ: 

ದ್ವಿಪಕ್ಷೀಯ ಮಾತುಕತೆಗಾಗಿ ಶ್ವೇತ ಭವನ ತಲುಪಿದ ಮೋದಿಯವರಿಗೆ ಭವ್ಯವಾದ ಸ್ವಾಗತ ದೊರೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು