ರಷ್ಯಾ ‘ಭಯೋತ್ಪಾದಕ ದೇಶ’ ವೆಂದು ಘೋಷಿಸಿ: ಬ್ರಿಟನ್ ಸಂಸತ್ತಿಗೆ ಝೆಲೆನ್‌ಸ್ಕಿ ಮನವಿ

ಲಂಡನ್: ತಮ್ಮ ದೇಶದ ಮೇಲೆ ಆಕ್ರಮಣ ಮಾಡಿರುವ ರಷ್ಯಾವನ್ನು ‘ಭಯೋತ್ಪಾದಕ ದೇಶ’ಎಂದು ಗುರುತಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಮಂಗಳವಾರ ಬ್ರಿಟಿಷ್ ಸಂಸದರಿಗೆ ಕರೆ ನೀಡಿದ್ದಾರೆ. ರಷ್ಯಾ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವಂತೆ ಕರೆ ನೀಡಿದರು.
ವಿಡಿಯೊ ಸಂವಾದದ ಮೂಲಕ ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ‘ಐತಿಹಾಸಿಕ’ಭಾಷಣ ಮಾಡಿದ 44 ವರ್ಷದ ಉಕ್ರೇನ್ ನಾಯಕನಿಗೆ ಸಂಸತ್ತಿನ ಸದಸ್ಯರು ನಿಂತು ಚಪ್ಪಾಳೆ ತಟ್ಟಿದರು.
‘ನಾವು ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ. ಈ ಸಹಾಯಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಬೋರಿಸ್, ನಾನು ನಿಮಗೆ ಕೃತಜ್ಞನಾಗಿದ್ದೇನೆ’ಎಂದು ಬ್ರಿಟಿಷ್ ಸಂಸತ್ತು ಮತ್ತು ಪ್ರಧಾನಿಯನ್ನು ಉದ್ದೇಶಿಸಿ ಝೆಲನ್‌ಸ್ಕಿ ಹೇಳಿದರು.
ಇದನ್ನೂ ಓದಿ.. ತಾವು ಸಾಕಿದ ಜಾಗ್ವಾರ್, ಕರಿಚಿರತೆ ಬಿಟ್ಟು ಬರಲು ನಿರಾಕರಿಸಿದ ಭಾರತೀಯ ವೈದ್ಯ
ಇದನ್ನೂ ಓದಿ.. ರಷ್ಯಾದಿಂದ ತೈಲ ಆಮದು ನಿಷೇಧಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
‘ರಷ್ಯಾ ವಿರುದ್ಧ ನಿರ್ಬಂಧಗಳ ಒತ್ತಡವನ್ನು ಹೆಚ್ಚಿಸಿ ಮತ್ತು ದಯವಿಟ್ಟು ಆ ದೇಶ(ರಷ್ಯಾ)ವನ್ನು ಭಯೋತ್ಪಾದಕ ರಾಷ್ಟ್ರವೆಂದು ಗುರುತಿಸಿ. ಉಕ್ರೇನ್ ಆಗಸವನ್ನು ಸುರಕ್ಷಿತ ಎಂದು ಖಚಿತಪಡಿಸಿ. ನಿಮ್ಮ ದೇಶದ ಹಿರಿಮೆಗೆ ತಕ್ಕಂತೆ ನೀವು ಏನು ಮಾಡಬೇಕು ಎನ್ನುವುದನ್ನು ಅರಿತುಕೊಂಡು ಮಾಡುತ್ತೀರಿ ಎಂದು ನಂಬುತ್ತೇನೆ.’ಎಂದು ಅವರು ಹೇಳಿದರು.
ತಮ್ಮ ಭಾವನಾತ್ಮಕ ಭಾಷಣದಲ್ಲಿ ಝೆಲೆನ್‌ಸ್ಕಿ, ಬ್ರಿಟನ್ನಿನ ಯುದ್ಧ ಸಮಯದ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಮಾತುಗಳನ್ನು ಮೆಲುಕು ಹಾಕಿದರು. ವಾಯು, ಸಮುದ್ರ ಮತ್ತು ದೇಶದ ಬೀದಿಗಳಲ್ಲಿ ರಷ್ಯಾದ ಸೈನ್ಯದೊಂದಿಗೆ ಹೋರಾಟ ಮುಂದುವರಿಸುವುದಾಗಿ ಹೇಳಿದರು.
‘ನಾವು ನಮ್ಮ ದೇಶವನ್ನು ಬಿಟ್ಟುಕೊಡುವುದಿಲ್ಲ ಮತ್ತು ಸೋಲುವುದಿಲ್ಲ, ಕೊನೆಯವರೆಗೂ ನಾವು ನಮ್ಮ ಭೂಮಿಗಾಗಿ ಹೋರಾಟ ಮುಂದುವರಿಸುತ್ತೇವೆ. ಏನೇ ಬೆಲೆತೆತ್ತರೂ ಸಹ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.