ಬುಧವಾರ, ಅಕ್ಟೋಬರ್ 28, 2020
24 °C

ಕೋವಿಡ್‌ಗೆ ರಷ್ಯಾದಿಂದ ಮತ್ತೊಂದು ಲಸಿಕೆ: ಅನುಮೋದನೆ ನೀಡಿದ ವ್ಲಾಡಿಮಿರ್ ಪುಟಿನ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Vladimir Putin

ಮಾಸ್ಕೊ: ಕೋವಿಡ್–19 ವಿರುದ್ಧ ರಷ್ಯಾವು ಮತ್ತೊಂದು ಲಸಿಕೆ ಅಭಿವೃದ್ಧಿಪಡಿಸಿದೆ. ಈ ಲಸಿಕೆಗೂ ಅನುಮೋದನೆ ನೀಡಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಬುಧವಾರ ಘೋಷಿಸಿದ್ದಾರೆ.

ಸರ್ಕಾರಿ ಸಭೆಯೊಂದರಲ್ಲಿ ಈ ವಿಚಾರ ಘೋಷಿಸಿದ ಅವರು, ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಸೈಬೀರಿಯಾದ ವೆಕ್ಟರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಲಸಿಕೆಯ ಮೊದಲ ಹಂತದ ಪ್ರಯೋಗ ಕಳೆದ ತಿಂಗಳು ಕೊನೆಗೊಂಡಿತ್ತು.

‘ಮೊದಲ ಹಾಗೂ ಎರಡನೇ ಹಂತದಲ್ಲಿ ಅಭಿವೃದ್ಧಿಗೊಂಡಿರುವ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ನಾವು ವಿದೇಶಿ ಪಾಲುದಾರರೊಂದಿಗೆ ಸಹಕಾರ ಮುಂದುವರಿಸಲಿದ್ದೇವೆ. ನಮ್ಮ ಲಸಿಕೆಯನ್ನು ವಿದೇಶಗಳಲ್ಲಿಯೂ ಪ್ರಚುರಪಡಿಸಲಿದ್ದೇವೆ’ ಎಂದೂ ಪುಟಿನ್ ಹೇಳಿದ್ದಾರೆ.

ಇದನ್ನೂ ಓದಿ: 

ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಗಳು ನಡೆಯುವ ಮುನ್ನವೇ ರಷ್ಯಾವು ಆಗಸ್ಟ್‌ನಲ್ಲಿ ಕೋವಿಡ್ ಲಸಿಕೆ ‘ಸ್ಪುಟ್ನಿಕ್‌–ವಿ’ಗೆ ಅನುಮೋದನೆ ನೀಡಿತ್ತು. ಈ ನಿರ್ಧಾರಕ್ಕೆ ವಿಶ್ವಮಟ್ಟದಲ್ಲಿ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದರು.

ಸ್ಪುಟ್ನಿಕ್‌–ವಿ ಲಸಿಕೆಯ ಬಗ್ಗೆ ವಿಶ್ವದಾದ್ಯಂತ ಭಾರಿ ಚರ್ಚೆಯಾಗಿತ್ತು. ಕೋವಿಡ್ ವಿರುದ್ಧ ಜಗತ್ತಿನ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾಗಿ ರಷ್ಯಾ ಘೋಷಿಸಿತ್ತು. ಆದರೆ, ಮೂರು ಹಂತಗಳ ಪ್ರಯೋಗವನ್ನು ನಡೆಸದೆಯೇ ಆತುರ ತೋರಲಾಗಿದೆ ಎಂದು ಪರಿಣತರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ‘ತಮ್ಮ ಮಗಳಿಗೆ ಲಸಿಕೆ ನೀಡಲಾಗಿದೆ, ಅದು ಪರಿಣಾಮಕಾರಿಯಾಗಿದೆ’ ಎಂದು ವ್ಲಾಡಿಮಿರ್‌ ಪುಟಿನ್‌ ಅವರೇ ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು