ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ್: ತಾಲಿಬಾನ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ರಷ್ಯಾ

ದೇಶವು ತಾಲಿಬಾನ್‌ ವಶಕ್ಕೆ ಬಂದ ಬಳಿಕದ ಮೊದಲ ಪ್ರಯತ್ನ
Last Updated 20 ಅಕ್ಟೋಬರ್ 2021, 12:44 IST
ಅಕ್ಷರ ಗಾತ್ರ

ಮಾಸ್ಕೋ: ರಷ್ಯಾ ಬುಧವಾರ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಇತರ ಬಣಗಳ ಹಿರಿಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿತು. ಇದು ಅಫ್ಗಾನ್‌ ಮೇಲೆ ಮಾಸ್ಕೋದ ಪ್ರಭಾವವನ್ನು ಒತ್ತಿಹೇಳುವ ಒಂದು ಸುತ್ತಿನ ರಾಜತಾಂತ್ರಿಕ ಮಾತುಕತೆಯಾಗಿತ್ತು.

ಮಾತುಕತೆಗೆ ಚಾಲನೆ ನೀಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಅಫ್ಗಾನಿಸ್ತಾನದಲ್ಲಿ ಸ್ಥಿರ ಶಾಂತಿ ಸ್ಥಾಪಿಸಲು ಎಲ್ಲ ಜನಾಂಗೀಯ ಗುಂಪುಗಳ ಮಾತ್ರವಲ್ಲದೆ ದೇಶದ ಎಲ್ಲ ರಾಜಕೀಯ ಶಕ್ತಿಗಳ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವಂತಹ, ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ರಚಿಸುವುದು ಅಗತ್ಯ ಎಂದರು.

ತಾಲಿಬಾನ್‌ನೊಂದಿಗೆ ಸಂಪರ್ಕ ಸಾಧಿಸಲು ರಷ್ಯಾ ವರ್ಷಗಟ್ಟಲೆ ಕೆಲಸ ಮಾಡಿತ್ತು. 2003ರಲ್ಲಿ ತಾಲಿಬಾನ್‌ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿದರೂ ಅದನ್ನು ಉಗ್ರ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಅಂತಹ ಗುಂಪುಗಳೊಂದಿಗಿನ ಯಾವುದೇ ಸಂಪರ್ಕವು ರಷ್ಯಾದ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ. ಆದರೆ ಅಫ್ಗಾನಿಸ್ತಾನದಲ್ಲಿ ಸ್ಥಿರತೆ ನೆಲೆಸುವಂತೆ ಮಾಡಲು ತಾಲಿಬಾನ್ ಜೊತೆಗಿನ ಮಾತುಕತೆ ಅತ್ಯಗತ್ಯ ಎಂದು ಹೇಳುವ ಮೂಲಕ ವಿದೇಶಾಂಗ ಸಚಿವಾಲಯವು, ವಿರೋಧಾಭಾಸದ ನಡೆಯ ಬಗೆಗಿನ ಪ್ರಶ್ನೆಗಳಿಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿದೆ.

ಆತ್ಮಹತ್ಯಾ ಬಾಂಬರ್‌ಗಳ ಕುಟುಂಬಳಿಗೆ ಪರಿಹಾರ: ತನ್ನಆತ್ಮಹತ್ಯಾ ಬಾಂಬರ್‌ಗಳ ತ್ಯಾಗವನ್ನು ಪರಿಗಣಿಸಿರುವ ತಾಲಿಬಾನ್‌, ಮೃತರ ಕುಟುಂಬಗಳಿಗೆ ಹಣಕಾಸಿನ ನೆರವು, ನಿವೇಶನ ನೀಡುವ ಭರವಸೆ ನೀಡಿದೆ. ಅದರ ಈ ನಡೆ ಅಂತರರಾಷ್ಟ್ರೀಯ ಬೆಂಬಲ ಗಳಿಸುವ ಯತ್ನಕ್ಕೆ ತೊಡಕಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT