ಲಂಡನ್ : ಸ್ಕಾಟ್‌ಲೆಂಡ್‌ನ ಮಹಿಳೆಯೊಬ್ಬರು ಬರೋಬ್ಬರಿ 48 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಕೊನೆಗೂ ತಮ್ಮ ಗಂಡು ಮಗುವಿನ ಕಳೇಬರದ ಅವಶೇಷಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಲೈದಿಯಾ ರೈಡ್ (74) ಕಾನೂನು ಹೋರಾಟದಲ್ಲಿ ಯಶಸ್ವಿಯಾಗಿರುವ ಮಹಿಳೆ. ಗರ್ಭಿಣಿ ದೇಹದಲ್ಲಿರುವ ಪ್ರತಿಕಾಯಗಳು ಮಗುವಿನ ರಕ್ತದ ಕಣಗಳನ್ನು ನಾಶ ಮಾಡುವ ಕಾಯಿಲೆಗೆ ತುತ್ತಾಗಿದ್ದ ರೈಡ್ ಅವರ ಕೂಸು ಜನಿಸಿದ ಒಂದು ವಾರದಲ್ಲೇ ಮೃತಪಟ್ಟಿತ್ತು.

‘ಮಗು ಮೃತಪಟ್ಟ ಕೆಲವು ದಿನಗಳ ನಂತರ ಆಸ್ಪತ್ರೆಯು ನನ್ನ ಮಗುವೆಂದು ಬೇರೊಂದು ಮಗುವನ್ನು ತೋರಿಸಿತ್ತು’ ಎಂದು ಲೈದಿಯಾ ಆರೋಪಿಸಿದ್ದರು. ತಮ್ಮ ಇಚ್ಛೆಗೆ ವಿರುದ್ಧವಾಗಿ ಮರಣೋತ್ತರ ಪರೀಕ್ಷೆ ನಡೆಸಿದ್ದಾಗಿಯೂ ಹೇಳಿದ್ದರು. ನಂತರ ಪುತ್ರನ ಕಳೇಬರ ಪಡೆಯಲು ಅವರು ಅಭಿಯಾನ ಆರಂಭಿಸಿದ್ದರು.

ಸತತ ನಾಲ್ಕು ದಶಕಗಳ ಕಾನೂನು ಹೋರಾಟದ ನಂತರ ಎಡಿನ್‌ಬರ್ಗ್ ರಾಯಲ್ ಆಸ್ಪತ್ರೆಯಲ್ಲಿದ್ದ ಮಗುವಿನ ಕಳೇಬರದ ಅವಶೇಷಗಳನ್ನು ತಾಯಿಗೆ ಹಸ್ತಾಂತರಿಸಲು ‘ದ ಕ್ರೌನ್ ಆಫೀಸ್’ ಅನುಮತಿ ನೀಡಿದೆ.

ಇಲ್ಲಿನ ಆಸ್ಪತ್ರೆಗಳು ಸತ್ತ ಮಕ್ಕಳ ದೇಹದ ಭಾಗಗಳನ್ನು ಸಂಶೋಧನೆಗೆಂದು ಅನಧಿಕೃತವಾಗಿ ಹೇಗೆ ಬಳಸಿಕೊಳ್ಳುತ್ತಿವೆ ಎಂಬುದನ್ನು ಹೊರಗೆಳೆಯುವ ಅಭಿಯಾನದಲ್ಲಿ ರೈಡ್ ಮುಖ್ಯ ಪಾತ್ರ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.