ಮಂಗಳವಾರ, ಸೆಪ್ಟೆಂಬರ್ 21, 2021
21 °C

ಗುರುತಿಸಲಾಗದ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ: ದಕ್ಷಿಣ ಕೊರಿಯಾ ಸೇನೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Reuters

ಸೋಲ್: ಅಣ್ವಸ್ತ್ರ ಹೊಂದಿರುವ ಉತ್ತರ ಕೊರಿಯಾ ಬುಧವಾರ ಕ್ಷಿಪಣಿಯೊಂದನ್ನು ಉಡಾಯಿಸಿದೆ. ಆದರೆ ಅದು ಯಾವ ಮಾದರಿಯ ಕ್ಷಿಪಣಿಯೆಂದು ಗುರುತಿಸಲು ಸಾಧ್ಯವಾಗಿಲ್ಲ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ.

ಪ್ಯಾಂಗಾಂಗ್‌ನಲ್ಲಿ ಒಂದು ದಿನದ ಹಿಂದಷ್ಟೇ ದೂರಗಾಮಿ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿತ್ತು ಎಂಬ ಮಾಹಿತಿಯನ್ನು ದ.ಕೊರಿಯಾ ಸೇನೆ ಹೇಳಿದೆ.

'ಗುರುತಿಸಲಾಗದ ಕ್ಷಿಪಣಿಯನ್ನು ಈಸ್ಟ್ ಸೀ(ಜಪಾನ್‌ ಸಾಗರ) ಕಡೆಗೆ ಉಡಾವಣೆ ಮಾಡಿದೆ' ಎಂದು ಸೋಲ್‌ನ ಸೇನಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. ಆದರೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಕ್ಷಿಪಣಿಯು ಯಾವ ಮಾದರಿಯದ್ದು, ಎಷ್ಟು ದೂರ ಕ್ರಮಿಸಬಲ್ಲದು ಮತ್ತು ಒಂದಕ್ಕಿಂತ ಹೆಚ್ಚು ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಬೇಕಿದೆ.

ಉ.ಕೊರಿಯಾದ 'ಅಕಾಡೆಮಿ ಆಫ್‌ ನ್ಯಾಷನಲ್‌ ಡಿಫೆನ್ಸ್‌ ಸೈನ್‌' ಪ್ಯಾಂಗಾಂಗ್‌ನಲ್ಲಿ ನಡೆಸಿದ ಯಶಸ್ವಿ ದೂರಗಾಮಿ ಕ್ರೂಸ್‌ ಕ್ಷಿಪಣಿ ಪರೀಕ್ಷೆಯನ್ನು 'ಆಯಕಟ್ಟಿನ ತಂತ್ರಕುಶಲತೆ ಹೊಂದಿರುವ ಮಹತ್ವದ ಅಸ್ತ್ರ' ಎಂದು ಅಲ್ಲಿನ ಅಧಿಕೃತ ಮಾಧ್ಯಮ ಕೊರಿಯನ್‌ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ ಬಣ್ಣಿಸಿದೆ.

ಕ್ಷಿಪಣಿಯು 2 ಗಂಟೆಯಲ್ಲಿ ಸುಮಾರು 1,500 ಕಿ.ಮೀ. ಕ್ರಮಿಸಿದೆ. ಉತ್ತರ ಕೊರಿಯಾದ ಪ್ರಾದೇಶಿಕ ಸಾಗರದ ಮೇಲೆ ಸಂಚರಿಸಿದ ಕ್ಷಿಪಣಿಯು ಗುರಿಯನ್ನು ತಲುಪಿದೆ ಎಂದು ಏಜೆನ್ಸಿ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು