ಈಸ್ಟರ್ ದಾಳಿ: ಸಿರಿಸೇನಾ ಅರ್ಜಿ ತಿರಸ್ಕರಿಸಿದ ಶ್ರೀಲಂಕಾ ನ್ಯಾಯಾಲಯ

ಕೊಲಂಬೊ: 2019ರ ಈಸ್ಟರ್ ದಾಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೋರಿ ಶ್ರೀಲಂಕಾದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಮೇಲ್ಮನವಿಯ ಉನ್ನತ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.
ಈ ದಾಳಿಯಲ್ಲಿ ಸುಮಾರು 270 ಮಂದಿ ಸಾವಿಗೀಡಾಗಿದ್ದರು. ‘ದಾಳಿಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ’ ಎಂದು ದಾಳಿಗೆ ಬಲಿಯಾದವರ ಸಂಬಂಧಿಕರ ಪೈಕಿ ಸುಮಾರು 108 ಮಂದಿ ಸಿರಿಸೇನಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
‘ರಾಜ್ಯವನ್ನು ಪ್ರತಿವಾದಿಯನ್ನಾಗಿ ಮಾಡುವ ಮೂಲಕ ಎಲ್ಲಾ ಪ್ರಕರಣಗಳಿಂದ ವೈಯಕ್ತಿಕವಾಗಿ ಬಿಡುಗಡೆ ಮಾಡಬೇಕು’ ಎಂದೂ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ದಾಳಿಯ ಸಂತ್ರಸ್ತರಿಗೆ 10 ಕೋಟಿ ಶ್ರೀಲಂಕಾ ರೂಪಾಯಿ (ಸುಮಾರು ₹ 22.25 ಲಕ್ಷ) ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಜ.12ರಂದು ಸಿರಿಸೇನಾ ಅವರಿಗೆ ಆದೇಶಿಸಿತ್ತು. ಪರಿಹಾರ ನೀಡದಿದ್ದರೆ ಜೈಲಿಗೆ ಕಳುಹಿಸುವುದಾಗಿಯೂ ಎಚ್ಚರಿಕೆ ನೀಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.