ಮಂಗಳವಾರ, ನವೆಂಬರ್ 24, 2020
22 °C

ತಾಲಿಬಾನ್‌‌ ಉಗ್ರರ ದಾಳಿ: ಅಫ್ಗಾನ್‌ನಲ್ಲಿ ಮೂವರ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬುಲ್‌: ‘ತಾಲಿಬಾನ್‌ ಉಗ್ರರು ಮಂಗಳವಾರ ಖೋಸ್ಟ್‌ ಪ್ರಾಂತ್ಯದಲ್ಲಿರುವ ಪೊಲೀಸ್‌ ನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ನಾಗರಿಕರು ಹತರಾಗಿದ್ದಾರೆ’ ಎಂದು ಅಫ್ಗಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. 

‘ಇದುವರೆಗೂ ಮೂರು ಮೃತದೇಹಗಳು ಪತ್ತೆಯಾಗಿವೆ. ಮಿಲಿಟರಿ ಹಾಗೂ ನಾಗರಿಕರು ಸೇರಿ ಅಂದಾಜು 30 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಖೋಸ್ಟ್‌ ಪ್ರಾಂತ್ಯದ ಆರೋಗ್ಯ ಅಧಿಕಾರಿ ಹಬೀಬ್‌ ಶಾ ಅನ್ಸಾರಿ ಹೇಳಿದ್ದಾರೆ.

‘ವಿಶೇಷ ಪೊಲೀಸ್‌ ಪಡೆಯ ನೆಲೆಯ ಸಮೀಪ ಮಂಗಳವಾರ ಮುಂಜಾನೆ ಮದ್ದು ಗುಂಡುಗಳನ್ನೊಳಗೊಂಡಿದ್ದ ವಾಹನವೊಂದು ಸ್ಫೋಟಗೊಂಡಿದೆ. ಪೊಲೀಸರು ನಾಲ್ವರು ದಾಳಿಕೋರರನ್ನು ಹೊಡೆದುರುಳಿಸಿದ್ದಾರೆ‌’ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರೀಕ್‌ ಆರನ್‌ ತಿಳಿಸಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು