ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷದ ನಾಯಕ ಅಲೆಕ್ಸಿ ಬಿಡುಗಡೆ ಒತ್ತಾಯ: ರಷ್ಯಾದಾದ್ಯಂತ ಬೃಹತ್ ರ‍್ಯಾಲಿ

Last Updated 31 ಜನವರಿ 2021, 10:56 IST
ಅಕ್ಷರ ಗಾತ್ರ

ಮಾಸ್ಕೊ: ಜೈಲಿನಲ್ಲಿರುವ ವಿರೋಧ ಪಕ್ಷದ ನಾಯಕ ಅಲೆಕ್ಸಿ ನಾವಲ್ನಿ ಅವರ ಬಿಡುಗಡೆಗೆ ಒತ್ತಾಯಿಸಿ ಭಾನುವಾರ ಸಾವಿರಾರು ಜನರು ರಷ್ಯಾದಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನಗರದ ಕ್ರೆಮ್ಲಿನ್‌ನಲ್ಲಿ ಗದ್ದಲ ಮಾಡಿದ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದರು.

ಕಳೆದ ವಾರ ವಾರಾಂತ್ಯದಲ್ಲಿ ದೇಶದಾದ್ಯಂತ ಸಾವಿರಾರು ಮಂದಿ ರ‍್ಯಾಲಿಗಳು ನಿರಂತರವಾಗಿ ನಡೆದವು. ಪ್ರತಿಭಟನಕಾರರನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಮಾಡಬೇಕು. ಇದು ಇತ್ತೀಚೆಗಿನ ವರ್ಷಗಳಲ್ಲಿ ದೇಶ ಕಂಡ ಆಡಳಿತದ ವಿರುದ್ಧದ ಅತಿ ದೊಡ್ಡ ಪ್ರತಿಭಟನೆ ಮತ್ತು ರ್‍ಯಾಲಿಯಾಗಿದೆ.

ರಷ್ಯಾದಾದ್ಯಂತ ವಿವಿಧ ನಗರಗಳಲ್ಲಿ ವಿವಿಧ ಕಾಲಮಾನಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 260ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ವಿರೋಧಿಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿ 44 ವರ್ಷದ ಅಲೆಕ್ಸಿ ನವಾಲ್ನಿ ಅವರನ್ನು ಜ 17ರಂದು ಬಂಧಿಸಲಾಯಿತು. ಜರ್ಮನಿಯಿಂದ ರಷ್ಯಾಗೆ ಪ್ರಯಾಣಿಸುವ ವೇಳೆಯಲ್ಲಿ ನವಾಲ್ನಿ ಅವರು ವಿಷ ಪದಾರ್ಥ ಸೇವಿಸಿ, ಅಸ್ವಸ್ಥರಾಗಿದ್ದರು. ಅದರಿಂದ ಚೇತರಿಸಿಕೊಳ್ಳಲು ಐದು ತಿಂಗಳ ಬೇಕಾಗಿತ್ತು.

ಪುಟಿನ್‌ ಅವರ ಎರಡು ದಶಕಗಳ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವಂತೆ ನವಾಲ್ನಿ ಕರೆ ನೀಡಿದ್ದರು. ಹೀಗಾಗಿ ಮಾಸ್ಕೊದಲ್ಲಿ ಶನಿವಾರ ಸಾವಿರಾರು ಮಂದಿ ಬೀದಿಗಿಳಿದಿದ್ದರು. ಪ್ರತಿಭಟನನಿರತರನ್ನು ಪೊಲೀಸರು ತಡೆಯಲು ಮುಂದಾದಾಗ ಘರ್ಷಣೆ ಸಂಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT