ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನ್‌ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಜಿ7 ಸಭೆ ಕರೆದ ಬ್ರಿಟನ್ ಪ್ರಧಾನಿ ಬೋರಿಸ್

Last Updated 24 ಆಗಸ್ಟ್ 2021, 1:36 IST
ಅಕ್ಷರ ಗಾತ್ರ

ಲಂಡನ್:‌ ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಗಮನದಲ್ಲಿರಿಸಿ ಅಲ್ಲಿನ ಜನರಿಗೆ ನೆರವು ನೀಡುವಬಗ್ಗೆ ಚರ್ಚಿಸುವುದಕ್ಕಾಗಿಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಜಿ7 ರಾಷ್ಟ್ರಗಳ ನಾಯಕರ ಸಭೆ ಕರೆದಿದ್ದಾರೆ.

ಸಭೆಯು ಇಂದು (ಮಂಗಳವಾರ) ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಯಲಿದ್ದು,20 ಸಾವಿರ ಅಫ್ಗಾನ್‌ ನಿರ್ಗತಿಕರನ್ನು ಸ್ಥಳಾಂತರಿಸುವುದು ಮತ್ತು ಸಂಕಷ್ಟದಲ್ಲಿರುವವರಿಗಾಗಿ392 ಮಿಲಿಯನ್‌ ಡಾಲರ್‌ (ಅಂದಾಜು 29 ಸಾವಿರ ಕೋಟಿ) ಮಾನವೀಯ ನೆರವು ನೀಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.‌ ಬ್ರಿಟನ್‌ ಪ್ರಧಾನಿ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌ ಮತ್ತು ಅಮೆರಿಕ ನಾಯಕರು ಭಾಗವಹಿಸಲಿದ್ದಾರೆ.

ʼನಮ್ಮ ನಾಗರಿಕರು ಮತ್ತು ಕಳೆದ20 ವರ್ಷಗಳಿಂದ ನಮ್ಮ ಪ್ರಯತ್ನಗಳಿಗೆ ನೆರವು ನೀಡಿದ ಅಫ್ಗನ್ನರನ್ನು ಸ್ಥಳಾಂತರಿಸುವುದು ಮೊದಲ ಆದ್ಯತೆಯಾಗಿದೆ. ಆದರೆ, ಒಂದು ಅಂತರರಾಷ್ಟ್ರೀಯ ಸಮುದಾಯವಾಗಿ ಮುಂದಿನ ಹಂತವನ್ನು ಎದುರು ನೋಡುವುದು ಮತ್ತು ದೀರ್ಘಾವಧಿಗೆಜಂಟಿಯಾಗಿಮುನ್ನಡೆಯುವುದನ್ನು ಒಪ್ಪಿಕೊಳ್ಳುವುದು ಅತ್ಯಗತ್ಯವಾಗಿದೆʼ ಎಂದು ಬೋರಿಸ್‌ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ಕೂಡ ಈ ಸಭೆಗೆ ಹಾಜರಾಗಲಿದ್ದಾರೆ.

ʼಅಫ್ಗಾನಿಸ್ತಾನ ಕುರಿತು ಚರ್ಚಿಸಲು ಕರೆದಿರುವ ಜಿ7 ರಾಷ್ಟ್ರಗಳ ವರ್ಚುವಲ್‌ ಸಭೆಗೆ ಮಹಾ ಪ್ರಧಾನ ಕಾರ್ಯದರ್ಶಿ ಅವರನ್ನೂ ಆಹ್ವಾನಿಸಲಾಗಿದೆʼ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT