ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ 12,000 ಸೈನಿಕರನ್ನು ಕೊಂದಿದ್ದೇವೆ: ಉಕ್ರೇನ್‌ ರಕ್ಷಣಾ ಸಚಿವಾಲಯ ಘೋಷಣೆ

Last Updated 8 ಮಾರ್ಚ್ 2022, 9:47 IST
ಅಕ್ಷರ ಗಾತ್ರ

ಕೀವ್‌: ಫೆಬ್ರುವರಿ 24ರಂದು ಆಕ್ರಮಣ ಪ್ರಾರಂಭವಾದಾಗಿನಿಂದ ಈ ವರೆಗೆ ರಷ್ಯಾದ ಸುಮಾರು 12,000 ಸೈನಿಕರನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್‌ನ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.

ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಪ್ರಕಟಿಸಿರುವ ರಕ್ಷಣಾ ಇಲಾಖೆ ಅಂಕಿ ಸಂಖ್ಯೆಗಳನ್ನು ಹಂಚಿಕೊಂಡಿದೆ.

ರಷ್ಯಾದ 303 ಟ್ಯಾಂಕ್‌ಗಳನ್ನು ಮತ್ತು 80 ಹೆಲಿಕಾಪ್ಟರ್‌ ಮತ್ತು 48 ಯುದ್ಧವಿಮಾನಗಳೂ ಸೇರಿದಂತೆ 120 ಕ್ಕೂ ಹೆಚ್ಚು ವಿಮಾನಗಳನ್ನು ಉಕ್ರೇನ್ ಮಿಲಿಟರಿ ನಾಶಪಡಿಸಿದೆ ಎಂದು ಹೇಳಲಾಗಿದೆ.

1,036 ಶಸ್ತ್ರಸಜ್ಜಿತ ಸಿಬ್ಬಂದಿ ವಾಹನಗಳು, 120 ಫಿರಂಗಿಗಳು, 56 ರಾಕೆಟ್‌ ಉಡಾವಣಾ ವ್ಯವಸ್ಥೆಗಳನ್ನು ಉಕ್ರೇನ್‌ನ ರಕ್ಷಣಾ ಪಡೆಗಳು ನಾಶಪಡಿಸಿವೆ ಎಂದೂ ತಿಳಿಸಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಫೆ.24ರಂದು ಉಕ್ರೇನ್‌ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿತು. ರಷ್ಯಾ ಸೇನಾ ಆಕ್ರಮಣದ ವಿರುದ್ಧದ ಉಕ್ರೇನ್‌ ಪ್ರತಿರೋಧವು ಜಾಗತಿಕವಾಗಿ ಪ್ರಶಸಂಸೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT