ಗುರುವಾರ , ಮಾರ್ಚ್ 23, 2023
29 °C

ಯುರೋಪ್ ಒಕ್ಕೂಟ ಶೃಂಗಸಭೆ: ಫೈಟರ್ ಜೆಟ್ ಪೂರೈಕೆಗೆ ಝೆಲೆನ್‌‌ಸ್ಕಿ ಒತ್ತಾಯ ಸಾಧ್ಯತೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬ್ರುಸೆಲ್ಸ್‌: ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್‌ನಲ್ಲಿ ಗುರುವಾರ ನಡೆಯಲಿರುವ ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮುಖ್ಯ ಆತಿಥಿಯಾಗಿ ಪಾಲ್ಗೊಳ್ಳಲಿದ್ದು, ರಷ್ಯಾ ವಿರುದ್ಧದ ಯುದ್ಧದಲ್ಲಿ ಸಾಧ್ಯವಾದಷ್ಟು ಫೈಟರ್ ಜೆಟ್‌ಗಳನ್ನು ತಲುಪಿಸಲು ಮಿತ್ರರಾಷ್ಟ್ರಗಳನ್ನು ಒತ್ತಾಯಿಸಲಿದ್ದಾರೆ ಎಂದು ವರದಿಯಾಗಿದೆ.

ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್ ಹಾಗೂ ಫ್ರಾನ್ಸ್‌‌ಗೆ ಅಚ್ಚರಿಯ ಭೇಟಿ ಕೊಟ್ಟಿರುವ ಝೆಲೆನ್‌ಸ್ಕಿ, ಉಭಯ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: 

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ರಾಜ ಮೂರನೇ ಚಾರ್ಲ್ಸ್ ಅವರನ್ನು ಭೇಟಿ ಮಾಡಿದ ಝೆಲೆನ್‌ಸ್ಕಿ ಬಳಿಕ ಬ್ರಿಟನ್ ಸಂಸತ್ತನ್ನು ಉದ್ದೇಶಿ ಮಾತನಾಡಿದರು.

ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ ಝೆಲೆನ್‌ಸ್ಕಿ ಚರ್ಚೆ ನಡೆಸಿದ್ದಾರೆ.

ಯುರೋಪ್ ಒಕ್ಕೂಟ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಉಪಸ್ಥಿತಿಯು ಯುರೋಪ್ ರಾಷ್ಟ್ರಗಳ ಒಗ್ಗಟ್ಟಿನ ಸಂಕೇತವಾಗಲಿದೆ ಎಂದು ಜರ್ಮನಿಯ ಚಾನ್ಸೆಲರ್‌ ಓಲಾಫ್ ಸ್ಕೋಲ್ಜ್ ಬಣ್ಣಿಸಿದ್ದಾರೆ.

ಇಯು ಶೃಂಗಸಭೆಯಲ್ಲಿ ಝೆಲೆನ್‌ಸ್ಕಿ, ಹೆಚ್ಚಿನ ಶಸ್ತ್ರಾಸ್ತ್ರಗಳು, ವಿಶೇಷವಾಗಿ ಫೈಟರ್ ಜೆಟ್ ಮತ್ತು ದೀರ್ಘ ವ್ಯಾಪ್ತಿಯ ಕ್ಷಿಪಣಿಗಳ ತ್ವರಿತ ಪೂರೈಕೆಗೆ ಒತ್ತಾಯಿಸುವ ಸಾಧ್ಯತೆಯಿದೆ.

ನಮ್ಮಲ್ಲಿ ಸಮಯ ತುಂಬಾನೇ ಕಡಿಮೆ ಇದೆ ಎಂದು ಪ್ಯಾರಿಸ್‌ನಲ್ಲಿ ಎಚ್ಚರಿಸಿರುವ ಝೆಲೆನ್‌ಸ್ಕಿ, ಎಷ್ಟು ಬೇಗ ನಾವು ಶಸ್ತ್ರಾಸ್ತ್ರಗಳನ್ನು ಮತ್ತು ನಮ್ಮ ಪೈಲಟ್‌ಗಳು ವಿಮಾನಗಳನ್ನು ಪಡೆಯುತ್ತಾರೆಯೋ ಅಷ್ಟು ಬೇಗನೇ ರಷ್ಯಾದ ಆಕ್ರಮಣವು ಕೊನೆಗೊಳ್ಳಲಿದ್ದು, ಯುರೋಪಿನಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ರಷ್ಯಾ ಆಕ್ರಮಣದ ವಿರುದ್ಧ ಹೋರಾಡಲು ಉಕ್ರೇನ್‌ಗೆ ನೆರವು ಮಾಡಲು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಲು ಬದ್ಧವಾಗಿದ್ದೇವೆ ಎಂದು ಬ್ರಿಟನ್ ಹಾಗೂ ಫ್ರಾನ್ಸ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು