ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀವ್‌ ಸೇರಿ ಮತ್ತಷ್ಟು ನಗರಗಳ ಮೇಲೆ ರಷ್ಯಾ ದಾಳಿ ಸಾಧ್ಯತೆ: ಉಕ್ರೇನ್

Last Updated 25 ಫೆಬ್ರುವರಿ 2022, 7:16 IST
ಅಕ್ಷರ ಗಾತ್ರ

ಕೀವ್: ‘ಉಕ್ರೇನ್ ರಾಜಧಾನಿ ಕೀವ್ ಸೇರಿದಂತೆ ಇತರ ಪ್ರಮುಖ ನಗರಗಳನ್ನು ರಷ್ಯಾದ ಸೇನಾಪಡೆ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಿದೆ’ ಎಂದು ಉಕ್ರೇನ್‌ನ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾ ಪಡೆಗಳು ಈಗಾಗಲೇ ಕೀವ್ ಹೊರವಲಯದ ಪ್ರದೇಶಗಳಿಗೆ ಲಗ್ಗೆ ಇಟ್ಟಿವೆ. ಯಾವ ಸಂದರ್ಭದಲ್ಲಿ ಬೇಕಾದರೂ ದಾಳಿ ನಡೆಸಬಹುದು ಎಂದುಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಸೇನಾಪಡೆ ಈಗಾಗಲೇ ಉಕ್ರೇನ್‌ನ 74 ಸೇನಾ ನೆಲೆಗಳನ್ನು ನಾಶಗೊಳಿಸಿದೆ. ಅದರಲ್ಲಿ 11 ವಾಯುನೆಲೆಗಳೂ ಸೇರಿವೆ ಎಂದು ರಷ್ಯಾ ಹೇಳಿಕೊಂಡಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಘೋಷಿಸಿದ ಬೆನ್ನಲ್ಲೇ, ಗುರುವಾರ ಬೆಳಿಗ್ಗೆ ಉಕ್ರೇನ್‌ನ ಸೇನಾನೆಲೆ ಸೇರಿದಂತೆ ಪ್ರಮುಖ ನಗರಗಳ ಮೇಲೆ ರಷ್ಯಾ ಕ್ಷಿಪಣಿ ಮತ್ತು ಶೆಲ್ ದಾಳಿ ನಡೆಸಲಾಗಿದೆ.

ರಷ್ಯಾ ಸೇನಾಪಡೆ ಬೆಲಾರಸ್‌ನ ದಿಕ್ಕಿನಿಂದ ಹೆಲಿಕಾಪ್ಟರ್‌ಗಳು ಮತ್ತು ಜೆಟ್‌ಗಳೊಂದಿಗೆ ನುಗ್ಗಿದ ನಂತರ ಕೀವ್‌ನ ಹೊರವಲಯದ ಗೊಸ್ಟೊಮೆಲ್ ಏರ್‌ಫೀಲ್ಡ್‌ ಅನ್ನು ಗುರುವಾರ ವಶಪಡಿಸಿಕೊಂಡಿತ್ತು.

ದಾಳಿಯಿಂದಾಗಿ ಗುರುವಾರ ಒಂದೇ ದಿನ ನಾಗರಿಕರು ಮತ್ತು ಸೇನಾ ಸಿಬ್ಬಂದಿ ಸೇರಿದಂತೆ 137 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT