ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್ಬುಕ್‌ನಲ್ಲಿ ಲಸಿಕೆ ಕುರಿತ ತಪ್ಪು ಮಾಹಿತಿ ಜನರನ್ನು ಕೊಲ್ಲುತ್ತಿದೆ: ಬೈಡನ್‌

Last Updated 17 ಜುಲೈ 2021, 2:07 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್ ಲಸಿಕೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿರುವ ತಪ್ಪು ಮಾಹಿತಿ ಜನರನ್ನು ಕೊಲ್ಲುತ್ತಿದೆ. ಫೇಸ್ಬುಕ್‌ ಈ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಾಕೀತು ಮಾಡಿದ್ದಾರೆ.

'ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದವರಲ್ಲಷ್ಟೇ ಕೋವಿಡ್‌ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದರೆ ಅವರು ಜನರನ್ನು ಕೊಲ್ಲುತ್ತಿದ್ದಾರೆ' ಎಂದು ಸಾಮಾಜಿಕ ಜಾಲತಾಣಗಳ ಮೇಲೆ ಬೊಟ್ಟು ಮಾಡಿದ್ದಾರೆ.

ಅಮೆರಿಕವು ಸಾಮಾಜಿಕ ಜಾಲತಾಣಗಳಿಗೆ ಮೂಗುದಾರ ತೊಡಿಸಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಒತ್ತಡಗಳನ್ನು ಹೇರುತ್ತಿರುವ ಬೆನ್ನಲ್ಲೇ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದ ತಪ್ಪುಮಾಹಿತಿಗಳು ಹರಿದಾಡುತ್ತಿವೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದವರ ಪೈಕಿ ಹೆಚ್ಚಿನವರು ಸುಲಭವಾಗಿ ಲಸಿಕೆ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ ಅಲ್ಲ. ಲಸಿಕೆ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಜನರು ವಿಶ್ವಾಸ ಕಳೆದುಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ತಪ್ಪು ಮಾಹಿತಿಯೇ ಕಾರಣ. ಕೋವಿಡ್‌ ಲಸಿಕೆ ನೀಡುವಿಕೆಯ ಹಿಂದೆ ಜನರನ್ನು ನಿಯಂತ್ರಣಕ್ಕೆ ತರುವ ಸರ್ಕಾರದ ಭಾಗವಾಗಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು ಎಂದು ವೈಟ್‌ ಹೌಸ್‌ನ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಕಿ ಹೇಳಿದ್ದಾರೆ.

ತಪ್ಪು ಮಾಹಿತಿಗಳು ರವಾನೆಯಾಗದಂತೆ ತಡೆಯುವಲ್ಲಿ ಫೇಸ್ಬುಕ್‌ ಮತ್ತು ಇತರ ಸಾಮಾಜಿಕ ಜಾಲತಾಣಗಳು ವಿಫಲವಾಗಿವೆ. ಇಂತಹ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಫೇಸ್ಬುಕ್‌ ಪ್ರಯತ್ನಿಸಬೇಕು ಎಂದು ಜೆನ್‌ ತಿಳಿಸಿದ್ದಾರೆ.

'ಲಸಿಕೆ ನೀಡುವಿಕೆ ಬಗ್ಗೆ ಶೇಕಡಾ 65ರಷ್ಟು ತಪ್ಪು ಮಾಹಿತಿ ನೀಡುತ್ತಿರುವುದು ಆ 12 ಮಂದಿ. ಎಲ್ಲರೂ ಫೇಸ್ಬುಕ್‌ನಲ್ಲಿ ಕ್ರಿಯಾಶೀಲರಾಗಿದ್ದಾರೆ. ಕೆಲವು ಇತರ ಸಾಮಾಜಿಕ ಜಾಲತಾಣಗಳನ್ನು ಅವರನ್ನು ನಿಷೇಧಿಸಿವೆ' ಎಂದಿರುವ ಜೆನ್‌ ಎಲ್ಲಿಯೂ ಆ 12 ಮಂದಿ ಯಾರು ಎಂಬುದನ್ನು ಬಹಿರಂಗ ಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT