ಶನಿವಾರ, ಡಿಸೆಂಬರ್ 4, 2021
26 °C

ಹೈಟಿ: ಅಮೆರಿಕದ 17 ಮಿಷನರಿಗಳ ಅಪಹರಣ

ಎಪಿ Updated:

ಅಕ್ಷರ ಗಾತ್ರ : | |

Prajavani

ಸ್ಯಾನ್ ಜುವಾನ್ (ಅಮೆರಿಕ): ಮಕ್ಕಳು ಸೇರಿದಂತೆ ಅಮೆರಿಕದ 17 ಮಿಷನರಿಗಳನ್ನು ಹೊಂದಿರುವ ಗುಂಪನ್ನು ಗ್ಯಾಂಗ್‌ವೊಂದು ಶನಿವಾರ ಹೈಟಿಯಲ್ಲಿ ಅಪಹರಿಸಿದೆ ಎಂದು ಹೇಳಲಾಗಿದೆ.

‘ಮಿಷನರಿಗಳು ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ, ತಮ್ಮ ಮನೆಗೆ ವಾಪಾಸಾಗುತ್ತಿದ್ದ ವೇಳೆ ಅವರನ್ನು ಅಪರಿಹರಿಸಲಾಗಿದೆ’ ಎಂದು ಹಲವು ಮಿಷನರಿಗಳನ್ನು ಒಳಗೊಂಡ ಸಂಘಟನೆಯೊಂದು ತಿಳಿಸಿದೆ.‌

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಸರ್ಕಾರದ ವಕ್ತಾರರು,‘ ನಮಗೆ ಈ ಘಟನೆ ಬಗ್ಗೆ ಅರಿವಿದೆ. ವಿದೇಶದಲ್ಲಿರುವ ಅಮೆರಿಕದ ನಾಗರಿಕರ ಕಲ್ಯಾಣ ಮತ್ತು ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆ’ ಎಂದರು.

‘ಅಪಹರಣಕಾರರು ಮಿಲಿಯನ್‌ ಡಾಲರ್‌ಗಿಂತ ಹೆಚ್ಚು ಬೇಡಿಕೆಯನ್ನು ಇಟ್ಟಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು