ಶುಕ್ರವಾರ, ಜುಲೈ 1, 2022
21 °C

9/11 ದಾಳಿಯ ಎಫ್‌ಬಿಐ ತನಿಖೆಯ ದಾಖಲೆ ಮಾರ್ಚ್‌ನಲ್ಲೇ ಬಿಡುಗಡೆ ಅನುಮಾನ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದ 3000 ಅಮಾಯಕ ಜನರ ಸಾವಿಗೆ ಕಾರಣವಾದ 2001ರ ಸೆ.11ರ ದಾಳಿಯ ಪ್ರಕರಣದ ಎಫ್‌ಬಿಐ ತನಿಖೆಯ ದಾಖಲೆಗಳನ್ನು ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ನೀಡಿದ ಗಡುವಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಒಪ್ಪಿಕೊಂಡಿದೆ. 

2002ರ ಸೆಪ್ಟೆಂಬರ್ 11ರಂದು ನಡೆದ ದಾಳಿಯ ಕುರಿತಾಗಿ ಎಫ್‌ಬಿಐ ತನಿಖೆಯ ದಾಖಲೆಗಳನ್ನು ಪರಿಶೀಲಿಸಿ, 6 ತಿಂಗಳ ಒಳಗಾಗಿ ಸಾರ್ವಜನಿಕಗೊಳಿಸಬೇಕು ಎಂದು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ  ಬೈಡನ್  ಅವರ ಸರ್ಕಾರ ನ್ಯಾಯಾಂಗ ಇಲಾಖೆಗೆ ಆದೇಶ ನೀಡಿತ್ತು.

ಮಾರ್ಚ್ ಮಧ್ಯಂತರ ಅವಧಿಯಲ್ಲಿ ಬಹುತೇಕ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಉಳಿದ ಎಲ್ಲಾ ದಾಖಲೆಗಳನ್ನು ಏಪ್ರಿಲ್ ಮಧ್ಯಂತರ ಅವಧಿಯಲ್ಲಿ ಸಾರ್ವಜನಿಕಗೊಳಿಸಲಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. 

ಈ ದಾಳಿಗೆ ಸೌದಿ ಅರೇಬಿಯಾದ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಎಫ್‌ಬಿಐ ತನ್ನ ವರದಿಯಲ್ಲಿ ಒತ್ತಿ ಹೇಳಿದೆ ಎನ್ನಲಾಗಿದೆ. ಅಲ್ಲದೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ 18 ಅಪಹರಣಕಾರರ ಪೈಕಿ 15 ಮಂದಿ ಸೌದಿ ಅರೇಬಿಯಾದವರು ಎನ್ನಲಾಗಿದೆ. 

ಅಲ್‌ಕೈದಾ ಉಗ್ರರು ಎಸಗಿದ್ದ ಈ ದಾಳಿಯು 9/11 ಎಂದೇ ಕುಖ್ಯಾತಿಯಾಗಿದೆ. ದಾಳಿಯಲ್ಲಿ ಸುಮಾರು 3 ಸಾವಿರ ಮಂದಿ ಸಾವನ್ನಪ್ಪಿ, 20 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು