ಮಂಗಳವಾರ, ಜೂನ್ 28, 2022
28 °C

ಸಿರಿಯಾದಿಂದ 17 ‍ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಕೆ?

ಎಪಿ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಸಿರಿಯಾ ವಿರುದ್ಧದ 77 ಆರೋಪಗಳ ಬಗ್ಗೆ ತಜ್ಞರು ತನಿಖೆ ನಡೆಸಿದ್ದಾರೆ. ಈ ಪೈಕಿ 17 ಪ್ರಕರಣಗಳಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿರುವ ಸಾಧ್ಯತೆಗಳಿವೆ ಎಂದು ಅಂತರರಾಷ್ಟ್ರೀಯ ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಕಾವಲು ಸಂಸ್ಥೆಯ ಮುಖ್ಯಸ್ಥರು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.

‘ಸಿರಿಯಾವು ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶಕ್ಕೆ ಸೇರ್ಪಡೆಯಾಗಿ ಎಂಟು ವರ್ಷಗಳಾಗಿವೆ. ಈ ವಿಷಯ ನಿಜಕ್ಕೂ ಚಿಂತಾಜನಕವಾಗಿದೆ’ ಎಂದು ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಸಂಸ್ಥೆಯ (ಒಪಿಸಿಡಬ್ಲ್ಯು) ಮುಖ್ಯಸ್ಥ ಫರ್ನಾಂಡೊ ಏರಿಯಾಸ್ ಹೇಳಿದ್ದಾರೆ.

‘ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ದೊಡ್ಡ ಕಂಟೇನರ್‌ವೊಂದರಿಂದ ಸಂಗ್ರಹಿಸಿದ ಮಾದರಿಯಲ್ಲಿ ರಾಸಾಯನಿಕ  ಶಸ್ತ್ರಾಸ್ತ್ರದ ಅಂಶವು ಪತ್ತೆಯಾಗಿತ್ತು. ಈ ಬಗ್ಗೆ ಒಪಿಸಿಡಬ್ಲ್ಯು ಮುಂದಿನ ಸಮಾಲೋಚನೆ ವೇಳೆ ಸಿರಿಯಾದೊಂದಿಗೆ ಚರ್ಚಿಸಲಿದೆ’ ಎಂದು ಅವರು ಗುರುವಾರ ತಿಳಿಸಿದರು.

‘ಈ ಬಗ್ಗೆ ಪರಿಶೀಲನೆ ನಡೆಸಲು ಒಪಿಸಿಡಬ್ಲ್ಯು ತಂಡವನ್ನು ಮೇ 18ರಿಂದ ಜೂನ್‌ 1ರವರೆಗೆ ಸಿರಿಯಾಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ವೀಸಾವನ್ನು ಕಳುಹಿಸುವಂತೆ ಸಿರಿಯಾ ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಲಾಗಿತ್ತು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹಾಗಾಗಿ ಈ ಭೇಟಿಯನ್ನು ಮೇ 28ಕ್ಕೆ ಮುಂದೂಡಲಾಯಿತು. ಆದರೆ ಮೇ 26ರ ತನಕ ಇದಕ್ಕೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದ ಕಾರಣ, ಭೇಟಿಯನ್ನು ಮತ್ತೆ ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು