ದಿನ ಭವಿಷ್ಯ | ಸೋಮವಾರ, 18ನೇ ಅಕ್ಟೋಬರ್‌ 2021 ದೈನಂದಿನ ರಾಶಿ ಭವಿಷ್ಯ

ಮೇಷ
ದೊಡ್ಡವರ ಮಾತನ್ನು ಧಿಕ್ಕರಿಸದಿದ್ದಲ್ಲಿ ಸಂತೋಷ ಹೊಂದುವಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ. ಪಂಚಮ ಶನಿಯ ನಿವೃತ್ತಿಗಾಗಿ ಆಂಜನೆಯನ ದರ್ಶನ ಮಾಡಿ. ಅತಿಯಾದ ಉತ್ಸಾಹ ಸಲ್ಲದು.
ವೃಷಭ
ಬೇಡವಾದ ಕಾರ್ಯವನ್ನು ವಹಿಸಿಕೊಳ್ಳುವ ಪ್ರಮೇಯ ಬರಬಹುದು. ಮನಸ್ಸಿನ ನೋವು ದೂರವಾಗಿ ಸಾಂಸಾರಿಕ ನೆಮ್ಮದಿ ನಿಮ್ಮದಾಗಲಿದೆ. ಅನಿರೀಕ್ಷಿತ ಕ್ಷಣಗಳು ನಿಮಗಾಗಿ ಕಾಯುತ್ತಿವೆ. ಸ್ವಂತ ಉದ್ಯೋಗದಲ್ಲಿ ಯಶಸ್ಸು.
ಮಿಥುನ
ಇರುಸು ಮುರುಸಿನಿಂದ ಪಾರಾಗಲು ಕೆಲವು ವಿಚಾರದಲ್ಲಿ ವಾದ ವಿವಾದಕ್ಕೆ ಆಸ್ಪದ ನೀಡದೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತ. ಮನೆಯ ಆಂತರಿಕ ವ್ಯವಹಾರ ಬೇರೆಯವರಲ್ಲಿ ಹಂಚಿಕೊಳ್ಳದಿರುವುದು ಲೇಸು.
ಕಟಕ
ಭವಿಷ್ಯದ ಬಗ್ಗೆ ಅತಿಯಾದ ಚಿಂತೆ ಅನಗತ್ಯ. ರೈತರಿಗೆ ಉತ್ಪಾದನೆಯಲ್ಲಿ ಹೆಚ್ಚಳ ಕಾಣುವಿರಿ. ಬಂಧುಗಳ ಆಗಮನ. ಸಹೋದರರಿಂದ ಸಹಕಾರ ದೊರೆಯವುದು. ಅಗ್ನಿಯ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಸಿಂಹ
ಹಣಕಾಸಿನ ವ್ಯವಹಾರದಲ್ಲಿ ಅಪನಂಬಿಕೆಗಳು ದೂರವಾಗಿ ದೃಢತೆಯನ್ನು ಸಾಧಿಸುವಿರಿ. ಸಾಧ್ಯವಾದಷ್ಟು ಮುಕ್ತ ಮನಸ್ಕರಾಗಿ ವ್ಯವಹರಿಸಿ. ಮನಸ್ಸಿನ ಸಂಕಲ್ಪ ಈಡೇರಿ ಯಶಸ್ಸು ಕಾಣುವಿರಿ.
ಕನ್ಯಾ
ವಿದೇಶ ಪ್ರಯಾಣದ ಕನಸು ನನಸಾಗುವ ಸಾಧ್ಯತೆ. ಮಾಡಿದ ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಸ್ಥಿರಾಸ್ತಿ ಮತ್ತು ವಾಹನ ಖರೀದಿಗೆ ಸಕಾಲ. ವ್ಯವಹಾರದಲ್ಲಿ ಉನ್ನತಿ ಪಡೆಯಲಿದ್ದೀರಿ. ಬಂಧುಗಳ ಆಗಮನದಿಂದಾಗಿ ಸಂಭ್ರಮ.
ತುಲಾ
ತಂತ್ರಜ್ಞರು ವಿವಿಧ ಪ್ರಯೋಗಗಳಲ್ಲಿ ಪ್ರಗತಿಯನ್ನು ಸಾಧಿಲಿದ್ದೀರಿ. ಸ್ತ್ರೀಯರಿಗೆ ಕೆಲಸದ ಒತ್ತಡದಿಂದಾಗಿ ಬೆನ್ನು ಉದರ ಸಂಬಂಧಿ ನೋವು ಸಾಧ್ಯತೆ. ಕಡಲಿನ ಉತ್ಪನ್ನಗಳಿಂದ ಹೆಚ್ಚಿನ ಆದಾಯ ನಿರೀಕ್ಷೆ.
ವೃಶ್ಚಿಕ
ತಾಳ್ಮೆಯನ್ನು ಕಳೆದುಕೊಳ್ಳದೆ ನಡೆಸುವ ಕಾರ್ಯಗಳಲ್ಲಿ ಶ್ರದ್ಧೆವಹಿಸಿ. ಮನಸ್ಸಿನ ಭಾವನೆಗೆ ಧಕ್ಕೆಯಾಗಲಾರದು. ಪತ್ರಿಕಾ ಪ್ರತಿನಿಧಿಗಳಿಗೆ ಸಂತೋಷದಾಯಕ ದಿನ. ಮಹಿಳಾ ಉದ್ಯಮಿಗಳಿಗೆ ಸಂತಸ.
ಧನು
ಹಳೆಯ ಶತ್ರುಗಳ ಬಗ್ಗೆ ಜಾಗೃತರಾಗಿರಿ. ಬೇರೆಯವರ ತಪ್ಪನ್ನು ಗ್ರಹಿಸಬೇಡಿ. ಆರ್ಥಿಕ ಕ್ಷೇತ್ರದಿಂದ ನಿರೀಕ್ಷಿತ ಫಲ ದೊರೆಯಲಿದೆ. ವಾತಾವರಣದಿಂದಾಗಿ ಅಸ್ತಮಾದಂತಹ ರೋಗಗಳು ಉಲ್ಬಣಿಸುವ ಸಾಧ್ಯತೆ.
ಮಕರ
ಕುಟುಂಬದ ಹತ್ತಿರದ ವ್ಯಕ್ತಿಗಳಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಂಭವ. ಕಳೆದುಹೋದ ಸಂಬಂಧಗಳು ಪುನಃ ವೃದ್ಧಿಗೊಳ್ಳುವವು. ಪ್ರೇಮಿಗಳ ವಿವಾಹಕ್ಕೆ ಆತುರತೆ ಬೇಡ. ಆರ್ಥಿಕ ರಂಗದಲ್ಲಿ ಸಾಮಾನ್ಯ ಪ್ರಗತಿ.
ಕುಂಭ
ನಿಮ್ಮ ಪಾಡಿಗೆ ನೀವಿದ್ದರೂ ವಿವಾದ ಅಂಟಿಕೊಳ್ಳುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ವಿವೇಕದಿಂದ ವರ್ತಿಸಿ. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬೇಡಿ. ನಿಮ್ಮ ಪ್ರಯತ್ನ ಮುಂದುವರಿಸಿ.
ಮೀನ
ಅತಿಯಾದ ತಿರುಗಾಟ ಮತ್ತು ಕೆಲಸದ ಒತ್ತಡದಿಂದ ಬಳಲುವ ಸಾಧ್ಯತೆ. ವಿಶ್ರಾಂತಿ ಮತ್ತು ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಭಾಗಿ. ಸಮಯೋಚಿತ ನಿರ್ಧಾರದಿಂದ ತೃಪ್ತಿ.
ಪ್ರಮುಖ ಸುದ್ದಿಗಳು
ಇತ್ತೀಚಿನ ಸುದ್ದಿಗಳು