‘ಮಾರ ಮಿಂದನು’ ಶ್ರೀಧರ ಬಳಗಾರರ ಏಳನೇ ಕಥಾಸಂಕಲನ. ಕಳೆದ ಮೂರು ದಶಕಗಳಿಂದ ಕಥಾಯಾನದಲ್ಲಿ ತೊಡಗಿಕೊಂಡಿರುವ (ಮೊದಲ ಸಂಕಲನ: ‘ಅಧೋಮುಖ’ – 1995) ಬಳಗಾರರು ಕನ್ನಡ ಕಥಾಲೋಕದ ಪ್ರಮಖ ಧ್ವನಿಯಾಗಿ ರೂಪುಗೊಂಡಿರುವುದಕ್ಕೆ ನಿದರ್ಶನದ ರೂಪದಲ್ಲಿ ಈ ಸಂಕಲನದ ಕಥೆಗಳನ್ನು ಗಮನಿಸಬಹುದು.

ಸುಖ ಹಾಗೂ ಸುಖದ ಆಳದಲ್ಲಿರಬಹುದಾದ ಅಪಸವ್ಯಗಳನ್ನೊಳಗೊಂಡ ಆಧುನಿಕ ಬದುಕಿನ ಸಾಧ್ಯತೆಗಳ ಶೋಧ ಹಾಗೂ ವರ್ತಮಾನದ ಬಿಕ್ಕಟ್ಟುಗಳ ಮುಖಾಮುಖಿ ಈ ಹೊತ್ತಿನ ಕನ್ನಡ ಕಥಾಸಾಹಿತ್ಯದ ಎರಡು ಮುಖ್ಯ ನೆಲೆಗಳು. ಈ ಜನಪ್ರಿಯ ಧಾರೆಗಳಿಂದ ದೂರ ಉಳಿದವರಂತೆ ಕಥೆಗಳನ್ನು ಕಟ್ಟುತ್ತಿರುವ ಬಳಗಾರರು ಮೂರು ದಶಕಗಳ ಅವಧಿಯಲ್ಲಿ ತಮ್ಮದೇ ಆದ ಅನನ್ಯ ಶೈಲಿಯೊಂದನ್ನು ರೂಪಿಸಿಕೊಂಡಿದ್ದಾರೆ. ಬದುಕಿನ ಸಣ್ಣ ಸಣ್ಣ ದನಿಗಳನ್ನು ಗಮನಿಸುತ್ತ, ಅದನ್ನು ಅಷ್ಟೇ ಘನವಾದ ಭಾಷೆಯಲ್ಲಿ ಹಿಡಿದಿಡುವ ಪ್ರಯತ್ನ ಅವರದು. ವಿರಳ ಮನೆಗಳ ಗಾಢ ಪರಿಸರ ಹಾಗೂ ಅಂತರಂಗದಲ್ಲಿ ಏಕಾಕಿಯಾದ ಮನುಷ್ಯರ ಬದುಕಿನ ಸಾಧ್ಯತೆಗಳನ್ನು ಶೋಧಿಸುವ ಪ್ರಯತ್ನಗಳ ಮೂಲಕ ಬಳಗಾರರ ಕಥೆಗಳು ಕರುಣಿಸುವ ಅನುಭವ, ಸಣ್ಣಕಥೆಯ ಚೌಕಟ್ಟನ್ನು ವಿಸ್ತರಿಸಲು ಸಹೃದಯರನ್ನು ಒತ್ತಾಯಿಸುವಂತಿದೆ.

‘ಮಾರ ಮಿಂದನು’ ಸಂಕಲನದ ಪಾತ್ರಗಳು ಮೇಲ್ನೋಟಕ್ಕೆ ವರ್ತಮಾನದ ಭರಾಟೆಯ ಲೋಕಕ್ಕೆ ಸೇರದಂತೆ ಕಾಣಿಸಿದರೂ, ಆ ಪಾತ್ರಗಳ ಮನಸ್ಸಿನ ತಾಕಲಾಟಗಳು ಈ ಹೊತ್ತಿನ ಮನುಷ್ಯನ ಬದುಕಿನ ಸಿಕ್ಕುಗಳೇ ಆಗಿವೆ. ನಗರದ ಸೋಂಕಿನಿಂದ ದೂರವುಳಿದಿರುವ ಮೇದಿನಿಯ ‘ಹೋಮ್ ಸ್ಟೇ’ಗೆ ತನ್ನ ಯುವ ಗೆಳೆಯರೊಂದಿಗೆ ಬರುವ ದಾಕಪ್ಪನ ಮನಸ್ಸಿನ ತಳಮಳ, ಬೇರು ಬಿಳಲುಗಳ ನಡುವಿನ ಕೊಂಡಿ ಕಳೆದುಕೊಂಡ ಈ ತಲೆಮಾರಿನ ಬಹುತೇಕರದೂ ಆಗಿದೆ. ‘ರಂಭಾ ವಿವಾಹ’ ಕಥೆಯಲ್ಲಿನ ಪರಮಯ್ಯ ಹಾಗೂ ದಮಯಂತಿ ಅವರು ತೆಗೆದುಕೊಳ್ಳುವ ನಿಲುವು ಈ ಹೊತ್ತಿನ ನೈತಿಕ–ಅನೈತಿಕತೆಯ ಕುರಿತ ಜಿಜ್ಞಾಸೆಯೂ ಆಗಿದೆ. ಜೀವನದ ಕಟುವಾಸ್ತವಗಳೆದುರು ನಾಟಕ (ಕಲೆ) ರಸಹೀನವಾಗಿ ಕಾಣಿಸುವುದು, ಮೈಮನಗಳಲ್ಲಿ ತಾರುಣ್ಯ ಉಳಿಸಿಕೊಂಡ ತಂದೆ ಹಾಗೂ ತಾರುಣ್ಯದಲ್ಲೇ ಮುಪ್ಪಡರಿದಂತಿರುವುದು (‘ಅಕಾಲ’), ಹಾಸ್ಟೆಲ್ನಲ್ಲಿನ ಮಕ್ಕಳು ಸೇರಿದಂತೆ ನಗರದ ನಾಗರಿಕರ ಆರೋಗ್ಯ ಸಮಸ್ಯೆಗಳಿಗೆ ಕುಡಿಯುವ ನೀರು ಕಲುಷಿತವಾಗಿರುವುದೇ ಕಾರಣ ಎನ್ನುವ ಯಾರಿಗೂ ಮುಖ್ಯವೆನ್ನಿಸದ ಸತ್ಯದಿಂದ ಮಾರ ದಿಗ್ಭ್ರಮೆಗೊಳ್ಳುವುದು – ಈ ಕಂಪನಗಳು ತಮ್ಮ ಪಾತ್ರ, ಪರಿಧಿ, ಪರಿಸರದಾಚೆಗೂ ವಿಸ್ತರಿಸಿ, ಈ ತಲೆಮಾರಿನ ಬದುಕಿನ ಶೋಧವೂ ಆಗುವುದರಲ್ಲಿ ಬಳಗಾರರ ಕಥನಗಳ ಅಪೂರ್ವ ಸಾಧನೆಯಿದೆ.

ಮಾರ ಮಿಂದನು

ಲೇ: ಶ್ರೀಧರ ಬಳಗಾರ

ಪು: 160

ಬೆ: ರೂ. 200

ಪ್ರ: ಅಮೂಲ್ಯ ಪುಸ್ತಕ, ಬೆಂಗಳೂರು. ಫೋನ್: 9448676770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.